ಪ್ರಗತಿವಾಹಿನಿ ಸುದ್ದಿ, ಸೊಲ್ಲಾಪುರ
ಶಿವಾಚಾರ್ಯರಲ್ಲಿ ಅಗ್ರಗಣ್ಯರಾಗಿರುವ ಸೊಲ್ಲಾಪುರದ ಸಂಸದರಾಗಿ ಆಯ್ಕೆಯಾದ ಗೌಡಗಾಂವದ ಡಾ. ಜಡೆಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಆಯ್ಕೆಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಂತಸ ವ್ಯಕ್ತಪಡಿಸಿ, ಅವರನ್ನು ಅಭಿನಂಧಿಸಿದ್ದಾರೆ.
ವೀರಶೈವ ಮಠಾಧಿಪತಿಗಳಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸುತ್ತಿರುವ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹೆಸರು ವಾಸಿಯಾಗಿರುವ ಶ್ರೀಗಳು ಲೋಕಸಭೆಯನ್ನು ಪ್ರವೇಶಿಸುತ್ತಿರುವುದು ಅಭಿಮಾನದ ಸಂಗತಿ. ಇವರ ಆಯ್ಕೆ ಇಡೀ ಶಿವಾಚಾರ್ಯರ ಆಯ್ಕೆ ಎಂದು ನಾವು ಭಾವಿಸಿದ್ಧೇವೆ. ಪೂಜ್ಯರಿಂದ ಹೆಚ್ಚು ಹೆಚ್ಚು ಕಾರ್ಯಗಳು ಆಗಲಿ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಆದರೆ ಮಹಾರಾಷ್ಟ್ರದಲ್ಲಿ ಜಡೆ ಸಿದ್ಧೇಶ್ವರ ಶಿವಯೋಗಿ ಆಯ್ಕೆ ಆಗಿರುವುದು ಅಭಿಮಾನದ ಸಂಗತಿ ಎಂದು ಹುಕ್ಕೇರಿ ಶ್ರೀ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ