ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
1982ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಮನೆಯನ್ನು ಸ್ಮಾರಕವಾಗಿ ನವೀಕರಿಸಲಾಗಿದ್ದು, ಬೇಲೂರು ಮಠದ ಸ್ವಾಮಿ ಸುವಿರಾನಂದಜೀ ಮಹಾರಾಜ್ ಶುಕ್ರವಾರಿ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದರು ಉಪಯೋಗಿಸಿದ್ದ ಕೋಲು, ಮಂಚ, ಕನ್ನಡಿಯನ್ನು ಸಂರಕ್ಷಿಸಿ ಸ್ಮಾರಕದಲ್ಲಿ ಇಡಲಾಗಿದೆ. ಸ್ಮಾರಕದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ತೈಲವರ್ಣದ ವಿವೇಕಾನಂದರ ಜೀವನ ಸಂದೇಶವನ್ನು ಸಾರುವಂತಹ ಚಿತ್ರಗಳು ಹಾಗೂ ಅನೇಕ ಹಳೆಯ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸ್ವಾಮಿ ತದ್ಯುಕ್ತಾನಂದಜೀಯವರು ಈ ಐತಿಹಾಸಿಕ ಮನೆಯ ಹಿನ್ನೆಲೆ ಹಾಗೂ ವಿಶೇಷತೆಯನ್ನು ವಿವರಿಸಿದರು. ಈ ಮನೆಯ ಜೀರ್ಣೋದ್ಧಾರ ನಡೆದು ಬಂದ ಬಗೆಯನ್ನು ಜೀಣೋದ್ಧಾರದ ಮುಖ್ಯ ಆರ್ಕಿಟೆಕ್ ಗುಂಡು ರಾವ್ ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವಾಮಿ ಸುವಿರಾನಂದಜೀ, ವಿವೇಕಾನಂದರ ಜೀವನದ ಮಹತ್ವವನ್ನ ವಿವರಿಸಿ ವಿವೇಕಾನಂದರ ಸ್ಮಾರಕವು ಬೆಳಗಾವಿಯಲ್ಲಿರುವುದು ಇಲ್ಲಿಯ ಜನರ ಭಾಗ್ಯವೆಂದು ತಿಳಿಸಿದರು.
ಊಟಿಯ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ರಾಘವೇಶಾನಂದರು ವಿವೇಕಾನಂದರ ಉನ್ನತ ಜೀವನದ ಮಹತ್ವದ ಘಟನೆಗಳನ್ನು ವಿವರಿಸಿದರು.
ಸಮಾರಂಭಕ್ಕೆ ಆಗಮಿಸಿದ ಯತಿವರ್ಯರನ್ನು ಗೌರವಿಸಲಾಯಿತು. ಸ್ವಾಮಿ ಮುಕ್ತಿವ್ರತಾನಂದರು ವಂದನಾರ್ಪಣೆ ನೆರವೇರಿಸಿದರು. ಶನಿವಾರ ಯುವ ಸಮ್ಮೇಳನ, ಭಾನುವಾರ ಭಕ್ತ ಸಮ್ಮೇಳನವು ಕೋಟೆಯ ಆಶ್ರಮದಲ್ಲಿದ್ದು ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವೇಕಾನಂದ ಸ್ಮಾರಕದಲ್ಲಿ ಜರುಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ