Kannada NewsLatest

ಹನುಮಾನ್ ನಗರದಲ್ಲಿ ಅಹವಾಲು ಆಲಿಸಿದ ಶಾಸಕ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  

ಇಲ್ಲಿಯ ವಾರ್ಡ್ ನಂ.40ರ ಹನುಮಾನ್ ನಗರ, ಕುವೆಂಪು ನಗರ ಹಾಗೂ ಶ್ರೀರಾಮ ಕಾಲನಿಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಶಾಸಕ ಅನಿಲ ಬೆನಕೆ ಅಲ್ಲಿನ ನಾಗರಿಕರ ಅಹವಾಲುಗಳನ್ನು ಆಲಿಸಿದರು.

ಬಡಾವಣೆಯ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ವಾರ್ಡ್ ನಿಕಟಪೂರ್ವ ಸದಸ್ಯೆ ಅನುಶ್ರೀ ದೇಶಪಾಂಡೆ ಮಾಡಿದ ಪ್ರಯತ್ನದಿಂದಾಗಿ ಇನ್ನು 8 ದಿನದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಇಲ್ಲಿನ ಬಹುತೇಕ ಪ್ರಮುಖ ಸಮಸ್ಯೆಗಳನ್ನು ಅವರು ಪರಿಹರಿಸಿದ್ದಾರೆ. ಉಳಿದಿರುವ ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

Home add -Advt

ಶಿವಾಲಯ ನಿರ್ಮಾಣಕ್ಕೆಂದು ಬಿಟ್ಟಿದ್ದ ಜಾಗದಲ್ಲಿ ಹಿಂದಿನ ಶಾಸಕರು ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಶಿವಾಲಯ ನಿರ್ಮಾಣ ಮಾಡಬೇಕು ಎಂದು ನಿವಾಸಿಗಳು ಕೋರಿದರು. ಪಕ್ಕದಲ್ಲೇ ಇರುವ 4 ಗುಂಟೆ ಜಾಗದಲ್ಲಿ ಶಿವಾಲಯ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ ಬೆನಕೆ, ಅದಕ್ಕೆ ತಮ್ಮಿಂದಾದ ನೆರವು ನೀಡುವುದಾಗಿ ತಿಳಿಸಿದರು. 

ವಾರ್ಡ್ ನಿಕಟಪೂರ್ವ ಸದಸ್ಯೆ ಅನುಶ್ರೀ ದೇಶಪಾಂಡೆ ಹಾಗೂ ಆ ಭಾಗದ ನಿವಾಸಿಗಳು ಇದ್ದರು. 

Related Articles

Back to top button