Latest

ಹುಟ್ಟುಹಬ್ಬದ ಸಂಭ್ರಮದ ದಿನವೇ ದುರಂತ; ಈಜುಕೊಳಕ್ಕೆ ಬಿದ್ದು ಮಗು ಸಾವು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಗುವಿನ ಹುಟ್ಟುಹಬ್ಬ ಅಚರಣೆಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾಗಲೇ ಈಜುಕೊಳದಲ್ಲಿ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಗುವಿನ 2ನೇ ವರ್ಷದ ಹುಟ್ಟುಹಬ್ಬ ಆಚರಣೆಗಾಗಿ ನಾಸಿಕ್ ಮೂಲಕದ ಕುತುಂಬ ಲೋನಾವಾಲಾದ ಬಂಗಲೆಯಲ್ಲಿ ಪಾರ್ಟಿಗೆ ಆಯೋಜನೆ ಮಾಡಿತ್ತು. ಮಗುವಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪೋಷಕರು ಹಾಗೂ ಸ್ನೇಹಿತರ ಬಳಗ ಬಂಗಲೆಯ ಮೊದಲ ಮಹಡಿಯಲ್ಲಿ ಎಂಜಾಯ್ ಮಾಡುತ್ತಿದ್ದರು.

ಈ ವೇಳೆ ಬಾಲಕ ಬಂಗಲೆಯ ಹೊರಗೆ ಆಟವಾಡುತ್ತಾ, ಈಜುಕೊಳದತ್ತ ಹೋಗಿದ್ದಾನೆ. ಪಾರ್ಟಿ ಸಂಭ್ರಮದಲ್ಲಿದ್ದ ಪೋಷಕರಿಗೆ ಮಗು ತಮ್ಮ ಬಳಿ ಇಲ್ಲ ಎಂಬುದೂ ಗೊತ್ತಾಗಿಲ್ಲ. ಈಜು ಕೊಳದತ್ತ ಹೋದ ಬಾಲಕ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ನೀಟ್ ಪರೀಕ್ಷೆಯಲ್ಲಿ ಒಳ ಉಡುಪು ತೆಗೆಸಿದ ಪ್ರಕರಣ; ಐವರು ಮಹಿಳೆಯರ ಬಂಧನ

Home add -Advt

Related Articles

Back to top button