ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಉಜ್ವಲ ಯೋಜನೆಯನ್ನು ರಾಯಬಾಗ ಮತಕ್ಷೇತ್ರದಲ್ಲಿ ಅನುಷ್ಠಾನ ಮಾಡುವ ಮೂಲಕ ಹೊಗೆ ಮುಕ್ತ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಅವರು ಶನಿವಾರ ಜೈನಾಪುರ, ಬಂಬಲವಾಡ, ಹತ್ತರವಾಟ, ಬಿದರೊಳ್ಳಿ, ಬೆಳಕೂಡ ಮುಂತಾದ ಗ್ರಾಮಗಳ ಫಲಾನುಭವಿಗಳಿಗೆ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸಗಳನ್ನು ವಿತರಿಸಿ ಮಾತನಾಡಿದರು. ಬಡ ಜನರ ಅನಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ 4ವರ್ಷಗಳಿಂದ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ. ಉಚಿತ ಗ್ಯಾಸ್ ವಿತರಣೆ ಮೂಲಕ ಬಡ ಹೆಣ್ಣು ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ ಎಂದರು.
ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ 70 ಫಲಾನುಭವಿಗಳಿಗೆ ಉಚಿತ ಗ್ಯಾಸ ನೀಡಲಾಗಿದೆ.
ನ್ಯಾಯವಾದಿ ರವಿ ಹಿರೇಕೊಡಿ ಮಾತನಾಡಿ, ಮಡ್ಡಿ ಭಾಗದ ರೈತರಿಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುವತ್ತ ಗಮನ ಹರಿಸಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಹಾನಿಯಾದ ಬೆಳೆಗಳಿಗೆ ವಿಮೆ ಸೌಲಭ್ಯ ನೀಡಿದರೆ ರೈತರು ಜೀವನ ನಡೆಸಲು ಅನುಕೂಲವಾಗುತ್ತದೆ. ಕರೋಶಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರಸ್ತೆ, ಶೌಚಾಲಯ, ಸಮುದಾಯ ಭವನಗಳು ಸೇರಿ ಅನೇಕ ಯೋಜನೆಗಳನ್ನು ಶಾಸಕರು ಕೈಗೊಂಡಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ