.
ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಹುಬ್ಬಳ್ಳಿಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದ ಮಾರುತಿ ಸ್ವಿಪ್ಟ್ (ಕೆಎ 25 ಪಿ 6593) ಕಾರಿನ ಟೈರ್ ಸಿಡಿದ ಪರಿಣಾಮ ಕಾರು ಬೆಳಗಾವಿಯ ಹೊನಗಾ-ಬೆನ್ನಾಳಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ 500 ಅಡಿಯಷ್ಟು ದೂರವಿರುವ ಹೊಲದಲ್ಲಿ ಬಿದ್ದು ನುಜ್ಜುಗುಜ್ಜಾಗಿದೆ.

ಕಾರು ಚಾಲಕ ಹುಬ್ಬಳ್ಳಿ ಮರಾಠಾ ಗಲ್ಲಿಯ ಅಜಯ ಗುರುನಾಥ ಗುಟಕೇಕರ್ (40) ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಕಾರಿನಲ್ಲಿ ಈತ ಒಬ್ಬನೇ ಪ್ರಯಾಣಿಸುತ್ತಿದ್ದ.

ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಪೊಲೀಸ್ ಠಾಣೆ ಪಿ ಎಸ್ ಐ ಅರ್ಜುನ ಹಂಚಿನಮನಿ ತನಿಖೆ ನಡೆಸಿದ್ದಾರೆ.