Latest

ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಜಿಐಟಿ ವಿದ್ಯಾರ್ಥಿಗಳ ಸಾಧನೆ

ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ

ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ಜಿಐಟಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ.

ಪ್ರಾಚಾರ್ಯರು, ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಈ ಅಂತರಾಷ್ಟ್ರೀಯ ಕಾರ್ಯಕ್ರಮಗಳ ಸಂಯೋಜಕರಾದ ಪ್ರೊ. ಶ್ವೇತಾ ಗೌಡರ್, ಪ್ರೊ. ಸತೀಶ್ ಹುಕ್ಕೇರಿ ಹಾಗೂ ಪ್ರೊ. ಸಂತೋಷ್ ಸರಾಫ್ ಉಪಸ್ಥಿತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳೇ  ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

. ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಫೆಲೋಶಿಪ್ ಗೆ ಜಿ ಟಿ ವಿದ್ಯಾರ್ಥಿಗಳ ಆಯ್ಕೆ

ಜಗತ್ತಿನ ಹದಿನಾರು ರಾಷ್ಟ್ರಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ “ಯೂನಿವರ್ಸಿಟಿ ಇನ್ನೋವೇಶನ್ ಫೆಲೋಶಿಪ್” ಈ ಕಾರ್ಯಕ್ರಮಕ್ಕೆ ಜಗತ್ ಪ್ರಸಿದ್ದ ಅಮೆರಿಕಾದ್ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಡಿಸೈನ್ ಸ್ಕೂಲ್  ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷವೂ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಕು. ನೀರಜ್ ದೇಶಪಾಂಡೆ, ಕು. ಚೇತನಕುಮಾರ್ ಆರ್, ಕುಮಾರಿ.ಪ್ರತೀಕ್ಷಾ ನಾಗರಕಟ್ಟೆ ಹಾಗೂ ಕುಮಾರಿ. ಎಂ. ಆರ್. ಜೋಶಿ ಈ  ನಾಲ್ಕು ವಿದ್ಯಾರ್ಥಿಗಳು ಈ ಅಂತರಾಷ್ಟ್ರೀಯ ಖ್ಯಾತಿಯ ಈ ಕಾರ್ಯಕ್ರಮಕ್ಕೆ  ಆಯ್ಕೆಯಾಗಿದ್ದರು.

ಆಯ್ಕೆ ವಿಧಾನದ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳು ಅತ್ಯಂತ ಕಠಿಣ ಸುತ್ತುಗಳ ಮೂಲಕ ಆಯ್ಕೆ ಮಾಡಲಾಗಿದೆ, ಇದರಲ್ಲಿ ಲಿಖಿತ ಪರೀಕ್ಷೆ, ಸಾಮಾಜಿಕ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಚರ್ಚೆಗಳು, ಸಾಮಾಜಿಕ / ತಾಂತ್ರಿಕ ಸಮಸ್ಯೆಗಳ ಕುರಿತಾದ ಪ್ರಸ್ತುತಿಗಳು, ನಿಯೋಜನೆ ಸಲ್ಲಿಕೆಗಳು ಮತ್ತು ಮುಖಾ -ಮುಖಿ ಸರಣಿ ಸಂವಾದಗಳು ಮತ್ತು ತಜ್ಞ ತಂಡಗಳು ಮತ್ತು ಕಾರ್ಯಕ್ರಮದ ಸಂಯೋಜಕರಿಂದ ಸ್ಕೈಪ್ ( ಆನ್ ಲೈನ್ ) ಮೂಲಕ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.  ಈ ಬಾರಿ ಸುಮಾರು ೩೫೦ ವಿದ್ಯಾರ್ಥಿಗಳನ್ನು ಜಗತ್ತಿನ ಬೇರೆ ಬೇರೆ ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಆಯ್ಕೆಮಾಡಲಾಗಿದೆ. ಈ ತರಬೇತಿ ಕಾರ್ಯಕ್ರಮವು ಮುಂದಿನ ವರ್ಷ (೨೦೧೯) ದ ಮಾರ್ಚ ೨೦ ರಿಂದ ೨೫ ರವರೆಗೆ ಅಮೇರಿಕಾದಲ್ಲಿ ನಡೆಯಲಿದೆ.

ಸಮಾಜದಲ್ಲಿ ವಿದ್ಯಾರ್ಥಿಗಳ ಸಮುದಾಯವನ್ನು ಸಕಾರಾತ್ಮಕ ಬದಲಾವಣೆಯ ಸಂಪನ್ಮೂಲ ವ್ಯಕ್ತಿಗಳನ್ನಾಗಿ  ಪರಿವರ್ತಿಸುವ ಶ್ರೇಷ್ಠ ಉದ್ದೇಶದೊಂದಿಗೆ ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಡಿಸೈನ್ ಸ್ಕೂಲ್   ಈ ಕಾರ್ಯಕ್ರಮವನ್ನು ಅಮೇರಿಕಾ ಸರ್ಕಾರದ ಐದು ವರ್ಷಗಳ ನ್ಯಾಶನಲ್ ಸೈನ್ಸ್ ಫೌಂಡೇಷನ್ ನಿಧಿಯ ಅಡಿಯಲ್ಲಿ ಎಂಜಿನಿಯರಿಂಗ್ ಪಾತ್ ವೇಸ್ ಇನ್ನೋವೇಷನ್ (ಎಪಿಸೆಂಟರ್) ನ ಅಂತರಾಷ್ಟೀಯ ಕಾರ್ಯಕ್ರಮವಾಗಿ ಆರಂಭವಾಯಿತು. ಇದನ್ನು  ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ  ಹ್ಯಾಸ್ಸೊ ಪ್ಲಾಟ್ನರ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (ಡಿ.ಸ್ಕೂಲ್) ನಡೆಸುತ್ತದೆ. ಇಲ್ಲಿಯವರೆಗೆ ಪ್ರಪಂಚದ ವಿವಿಧ ಭಾಗಗಳಿಂದ 1800 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆದಿದ್ದಾರೆ ಎಂದು ಭಾಗವಹಿಸಿದ ವಿದ್ಯಾರ್ಥಿಗಳು ಹೇಳಿದರು.

ಕಾರ್ಯಕ್ರಮದ ಮುಂದಿನ ರೂಪುರೇಷೆಗಳ ಬಗ್ಗೆ ಮಾತನಾಡುತ್ತಾ, ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ವಿದ್ಯಾಲಯಗಳಲ್ಲಿ ಮತ್ತು ಸಮಾಜದಲ್ಲಿ ಬೌದ್ಧಿಕವಾಗಿ ಮತ್ತು ಸಂಶೋಧನಾತ್ಮಕವಾಗಿ  ಬದಲಾವಣೆಯ ಮೊದಲ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ವಿದ್ಯಾರ್ಥಿಗಳು ಜಾಗತಿಕ ಸಮುದಾಯದ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಾರೆ ಹಾಗೆಯೆ ಇತರೆ ಎಲ್ಲಾ ವಿದ್ಯಾರ್ಥಿಗಳು ಭವಿಷ್ಯದ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಅಗತ್ಯವಾದ ವ್ಯಕ್ತಿತ್ವ, ಕೌಶಲ್ಯಗಳು ಮತ್ತು ಜ್ಞಾನವನ್ನು ಪಡೆದುಕೊಳ್ಳಲು ಹಾಗೂ ಪ್ರಪಂಚದಾದ್ಯಂತ ಇರುವ ವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನಸ್ಸನ್ನು ಬೆಳೆಸಲು, ಸೃಜನಶೀಲ ಮನಸ್ಸನ್ನು ಜಾಗೃತಗೊಳಿಸಲು, ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು, ಜಾಗತಿಕವಾಗಿ ಇರುವ ವೈಜ್ಞಾನಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ವ್ಯಾಖ್ಯಾನಿಸಲು, ಅರ್ಥೈಸಿಕೊಳ್ಳಲು ಮತ್ತು  ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುವ ಹೊಸ ಅವಕಾಶಗಳನ್ನು ಸೃಷ್ಟಿಸಲು ನಾವು ಜಿ ಐ ಟಿ ಯ ಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಭೇತಿಯನ್ನು ನೀಡುತ್ತೇವೆ ಎಂದು ಹೇಳಿದರು.

. ಜಪಾನ್ ಅಂತರಾಷ್ಟ್ರೀಯ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಜಿ ಟಿ ವಿದ್ಯಾರ್ಥಿಗಳ ಆಯ್ಕೆ

ವಿದ್ಯಾರ್ಥಿಗಳಾದ ಕು. ಅನಯ್ ಕುಲಕರ್ಣಿ, ಕು. ಅಮೋಘ ಹುಯಿಲಗೋಳ, ಕು. ಬದ್ರಿನಾಥ್ . ಕೆ, ಕು. ಸಮರ್ಥ್, ಕು. ಕಿಶೋರ್ ಹಾಗೂ ಕು. ಆದಿತ್ಯ ಠಕ್ಕರ ಅವರು ಜಪಾನ ಸರ್ಕಾರದ ಜಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಆಶ್ರದಯಲ್ಲಿ ರೂಪಿಸಿರುವ ಅತ್ಯಂತ ಪ್ರತಿಷ್ಠಿತ ಅಂತರಾಷ್ಟ್ರೀಯ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಜಪಾನಲ್ಲಿ ಇತ್ತೀಚಿಗೆ ನಡೆದ ೧೧ ದಿನಗಳ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದಾರೆ. ಇದು ಜಪಾನ್-ಏಷ್ಯಾ ವಿಜ್ಞಾನ ಯುವ ವಿನಿಮಯ ಕಾರ್ಯಕ್ರಮ (ಸಕುರಾ ವಿಜ್ಞಾನ ಯುವ ವಿನಿಮಯ)ದ ಭಾಗವಾಗಿದೆ. ಇದು  ನಾಲ್ಕನೇ ಕೈಗಾರಿಕಾ ಕ್ರಾಂತಿ (ಇಂಡಸ್ಟ್ರಿ 4.0) ಯ ವಿಷಯಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ತಂತ್ರಜ್ಞಾನ ತರಬೇತಿ ಕಾರ್ಯಕ್ರಮವಾಗಿದೆ. ಇದು ಜಪಾನದ ಶಿಬೌರಾ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ಮತ್ತು ಸಂವಹನ  ಇಂಜಿನಿಯರಿಂಗ್ ವಿಭಾಗದಲ್ಲಿ  ನಡೆಯಿತು. ಈ ಆರು ವಿದ್ಯಾರ್ಥಿಗಳ ಜೊತೆಗೆ ಮತ್ತು ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಶ್ವೇತಾ ಇಂದೂದರ್ ಗೌಡರ ಹಾಗೂ ಪ್ರೊ. ಸಂತೋಷ್ ಸರಾಫ್ ಮತ್ತು ಪ್ರಾಚಾರ್ಯರನ್ನು ಒಳಗೊಂಡ ಸಿಬ್ಬಂದಿ ತಂಡ ಜಪಾನಗೆ ಭೇಟಿ ನೀಡಿತ್ತು.

ಕೃತಕ ಬುದ್ಧಿಮತ್ತೆ (ಎಐ),  ಇಂಟರ್ನೆಟ್ ಆಫ್  ಥಿಂಗ್ಸ್(ಐ ಓ ಟಿ), ಬಿಗ್ ಡೇಟಾ ಮತ್ತು ರೊಬೊಟಿಕ್ಸ್ ತಂತ್ರಜ್ಞಾನಗಳನ್ನು ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ 4.0) ಪ್ರಮುಖ ತಂತ್ರಜ್ಞಾನಗಳೆಂದು  ಪರಿಗಣಿಸಲಾಗುತ್ತದೆ. ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ 4.0)  ರ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಂಬರುವ ತಂತ್ರಜ್ಞರಿಗೆ ಮಾಹಿತಿ ಮತ್ತು ಸಂವಹನ (ಐಸಿಟಿ) ಕ್ಷೇತ್ರದಲ್ಲಿ ತಾಂತ್ರಿಕ ನಿಪುಣರನ್ನಾಗಿ ಮಾಡಲು ಜಪಾನ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ ಈ ಕಾರ್ಯಕ್ರಮವನ್ನು ಪ್ರಾರಂಭಿಸಿತು ಜಪಾನ್-ಏಷ್ಯಾ ವಿಜ್ಞಾನ ಯುವ ವಿನಿಮಯ ಕಾರ್ಯಕ್ರಮ (ಸಕುರಾ ವಿಜ್ಞಾನ ಯುವ ವಿನಿಮಯ)ದ ಅಡಿಯಲ್ಲಿ ಪ್ರಾರಂಭಿಸಿತು. ಜಪಾನ್ ಸರ್ಕಾರದ ಪರವಾಗಿ ಜಪಾನದ ಶಿಬೌರಾ ತಾಂತ್ರಿಕ ಮಹಾವಿದ್ಯಾಲಯ  ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಭಾಗವಹಸಿದ ವಿದ್ಯಾರ್ಥಿಗಳು ತಿಳಿಸಿದರು. ಈ ಕಾರ್ಯಕ್ರಮದಲ್ಲಿ, ಭಾಗವಹಿಸುವವರು ಈ ನಾಲ್ಕು ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು  ಹೊಸ ಮಾಹಿತಿ ಮತ್ತು ಸಂವಹನ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರಚಿಸುವುದು ಹೇಗೆ ಮತ್ತು ವ್ಯವಸ್ಥೆಯನ್ನು ಸಮಾಜದಲ್ಲಿ ಜಾರಿಗೆ ತರಲು ಹೇಗೆ ಹಾಗೂ  ತಾಂತ್ರಿಕ ಪರಿಹಾರಗಳನ್ನು ರೂಪಿಸಲು ಸಂಶೋಧನಾ ಯೋಜನೆಯನ್ನು ಕಲಿಯುವರು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಐಐಟಿ ಗುವಾಹಾಟಿಯ ವಿದ್ಯಾರ್ಥಿ ತಂಡಗಳು ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ಭಾರತದಿಂದ ಆಯ್ಕೆಯಾದ ಎರಡೇ ಎರಡು ತಂಡಗಳಾಗಿವೆ ಎಂದು ವಿದ್ಯಾರ್ಥಿಗಳು ಹೇಳಿದರು. ಜಪಾನ್ ಮತ್ತು ಏಷ್ಯಾದ ದೇಶಗಳೂ ಸೇರಿದಂತೆ ಒಟ್ಟು 25 ಸಂಸ್ಥೆಗಳಿಂದ ವಿದ್ಯಾರ್ಥಿ ತಂಡಗಳು ಈ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು ಎಂದು ಹೇಳಿದರು.

 . ಜಿ ಟಿ ವಿದ್ಯಾರ್ಥಿ ಕು. ಪ್ರಸಾದ ಚಚಡಿ ಅಂತರಾಷ್ಟ್ರೀಯ ಆಟೋಮೇಷನ್ ಕಾರ್ಯಕ್ರಮಕ್ಕೆ ಆಯ್ಕೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿ  ಪ್ರಸಾದ್ ಚಚಡಿ ಮಾರ್ಚ್ 13 ರಿಂದ ಮಾರ್ಚ್ 17, 2019 ವರೆಗೆ ಕೆನಡಾದ ದಕ್ಷಿಣ ಅಲ್ಬರ್ಟಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ವರ್ಲ್ಡ್ ಸ್ಟೂಡೆಂಟ್ ಆಟೊಮೇಷನ್ ನ 7 ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಒಟ್ಟು 200 ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕಾಗಿ ಅರ್ಜಿ ಹಾಕಲಾಗಿದ್ದು, ಕಠಿಣ ಮೌಲ್ಯಮಾಪನ ನಂತರ 6 ವಿದ್ಯಾರ್ಥಿಗಳನ್ನು ಮಾತ್ರ  ಆಯ್ಕೆಮಾಡಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button