ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಅತೃಪ್ತರಾಗಿರುವ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲು ಅವರಿಗೆ ಸಚಿವಸ್ಥಾನದ ಆಮಿಶ ಒಡ್ಡಲಾಗಿದ್ದು, ಅದಕ್ಕಾಗಿ ನಾಲ್ವರು ಹಾಲಿ ಸಚಿವರ ರಾಜಿನಾಮೆ ಪಡೆಯಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ನಾಲ್ವರು ಹಿರಿಯ ಸಚಿವರ ರಾಜಿನಾಮೆ ಪಡೆಯುವ ಮೂಲಕ ಅತೃಪ್ತರಿಗೆ ಆ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಕೃಷ್ಣ ಭೈರೇಗೌಡ ಸೇರಿದಂತೆ ನಾಲ್ವರು ಹಿರಿಯ ಸಚಿವರು ಈಗಾಗಲೆ ಸರಕಾರ ಉಳಿಸುವುದಕ್ಕಾಗಿ ನಾವು ರಾಜಿನಾಮೆ ನೀಡಲು ಸಿದ್ಧ ಎಂದು ಈಗಾಗಲೆ ಹೇಳಿದ್ದಾರೆ.
ಸಚಿವ ಸ್ಥಾನದ ಭರವಸೆ ಪಡೆದಿರುವ ಶಾಸಕರು ಅತೃಪ್ತರ ಪಾಳಯದಿಂದ ಹೊರಬಂದಿದ್ಎದಾರೆ ಎನ್ನಲಾಗುತ್ತಿದೆ. ಆದರೆ ಈ ಬೆಳವಣಿಗೆ ಕಾಂಗ್ರೆಸ್ ನಲ್ಲಿ ಮತ್ತಷ್ಟು ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎನ್ನುವ ಆತಂಕ ಕೂಡ ಎದುರಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ