
ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ದಿ.ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕಪೂರ್ ಕೂಡ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಡಲು ಸಜ್ಜಾಗಿದ್ದಾರೆ.
ಈಗಾಗಲೇ ಶ್ರೀದೇವಿಯವರ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಬಿಟೌನ್ ಗೆ ಎಂಟ್ರಿ ಕೊಟ್ಟಿದ್ದು, ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಖುಷಿ ಕಪೂರ್ ಕೂಡ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಈ ಬಗ್ಗೆ ಖುಷಿ ತಂದೆ ಬೋನಿಕಪುರ್ ಸ್ವತ: ಮಾಹಿತಿ ನೀಡಿದ್ದು, ಶೀಘ್ರದಲ್ಲಿ ಖುಷಿ ಬಾಲಿವುಡ್ ಗೆ ಪ್ರವೇಶ ಮಾಡಲಿದ್ದಾಳೆ. ಅವಳಿಗೂ ನಟನೆ ಬಗ್ಗೆ ತುಂಬಾ ಆಸಕ್ತಿ. ಆದರೆ ನಾನು ಮಗಳಿಗೆ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಅವಳು ಕಂಫರ್ಟ್ ಝೋನ್ ನಿಂದ ಹೊರ ಬಂದು ಸಿನಿ ಜಗತ್ತಿನಲ್ಲಿ ಅನುಭವ ಪಡೆಯಬೇಕು. ಹಾಗಾಗಿ ಬೇರೆಯವರ ನಿರ್ಮಾಣದಲ್ಲಿ ಆಕೆ ಸಿನಿಮಾ ಮಾಡುತ್ತಾಳೆ ಎಂದಿದ್ದಾರೆ.