Latest

ಅಧಿವೇಶನ ಕಾಲಕ್ಕೆ ಸಂಚಾರ ಮಾರ್ಗ ಬದಲಾವಣೆ


   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಸುವರ್ಣ ವಿಧಾನ ಸೌಧ ದಲ್ಲಿ ಕರ್ನಾಟಕ ವಿಧಾನ ಮಂಡಳದ ಚಳಿಗಾಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಮುಖ್ಯ ಮಂತ್ರಿಗಳು, ಉಪ-ಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಸಭಾಪತಿಗಳು, ಸಚಿವರು ಹೀಗೆ ಇನ್ನಿತರ ಗಣ್ಯ ವ್ಯಕ್ತಿಗಳು ಸಂಚರಿಸುವ ಮಾರ್ಗದಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಹಾಗೂ ಬೆಳಗಾವಿ ನಗರದ ಹಾಗೂ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೂ ಯಾವುದೇ ಸಂಚಾರ ದಟ್ಟನೆಯಾಗದಂತೆ ಡಿ.10ರಿಂದ 15ರ ವರೆಗೆ ಹಾಗೂ 17ರಿಂದ 21ರ ವರೆಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಗಣ್ಯವ್ಯಕ್ತಿಗಳು ಸಂಚರಿಸುವ ರಸ್ತೆಗಳ ವಿವರ:
ಸಾಂಬ್ರಾ ವಿಮಾನ ನಿಲ್ದಾಣದಿಂದ ಬಾಗಲಕೋಟ ಕ್ರಾಸ್, ಮುತಗಾ, ಶಿಂಧೊಳ್ಳಿ ಕ್ರಾಸ್, ಬಸವನ ಕುಡಚಿ, ಎಸ್.ಸಿ. ಮೋಟರ‍್ಸ್, ಸಾಂಬ್ರಾ ಅಂಡರ್ ಬ್ರಿಜ್ ವರೆಗಿನ ಏರ್ ಪೋರ್ಟ ರಸ್ತೆ.
ಸಾಂಬ್ರಾ ಅಂಡರ್ ಬ್ರಿಜ್‌ದಿಂದ ಮುಚ್ಚಂಡಿ ಗ್ಯಾರೇಜ್‌ವರೆಗಿನ ಎರಡೂ ಬದಿ ಸರ್ವಿಸ್ ರಸ್ತೆ.
ಕನಕದಾಸ ವೃತ್ತದಿಂದ ಶ್ರೀನಗರ ಕ್ಯಾನ್ಸರ್ ಆಸ್ಪತ್ರೆ ವರೆಗಿನ ಎರಡೂ ಬದಿ ಸರ್ವಿಸ್ ರಸ್ತೆ.
ಸುವರ್ಣ ವಿಧಾನ ಸೌಧ ದಿಂದ ಫೇರ್‌ಫೀಲ್ಡ್ ಮ್ಯಾರಿಯೆಯೇಟ್ ಹೊಟೇಲ್, ಕಾಕತಿ
ಕನಕದಾಸ ವೃತ್ತದಿಂದ ಸರ್ಕಿಟ್ ಹೌಸ ವರೆಗೆ
ಸಾಂಬ್ರಾ ಅಂಡರ್ ಬ್ರಿಜ್‌ದಿಂದ ಗಾಂಧಿ ನಗರ ವರೆಗಿನ ಸರ್ವಿಸ್ ರಸ್ತೆ, ಸಂಕಮ್ ಹೊಟೇಲ್ ಹಾಗೂ ನಿತ್ಯಾನಂದ ಸರ್ಕಲ್ ವರೆಗಿನ ರಸ್ತೆ.
ಕಿಲ್ಲಾ ಕೆರೆ ಅಶೋಕ ಪಿಲ್ಲರ ವೃತ್ತದಿಂದ ಚನ್ನಮ್ಮಾ ವೃತ್ತ ಮಾರ್ಗವಾಗಿ ಕ್ಲಬ್ ರಸ್ತೆ ವರೆಗೆ
ಆರ್‌ಟಿಓ ವೃತ್ತದಿಂದ ಕೃಷ್ಣದೇವರಾಯ [ಕೊಲ್ಹಾಪುರ] ವೃತ್ತ ವರೆಗಿನ ಹಳೆ ಪಿಬಿ ರಸ್ತೆ.
ಚನ್ನಮ್ಮಾ ವೃತ್ತದಿಂದ ಕೃಷ್ಣದೇವರಾಯ [ಕೊಲ್ಹಾಪುರ] ವೃತ್ತ ವರೆಗಿನ ಡಾ.ಬಿ.ಆರ್.ಅಂಬೇಡ್ಕರ ರಸ್ತೆ.
ಚನ್ನಮ್ಮಾ ವೃತ್ತದಿಂದ ಕಾಲೇಜ್ ರಸ್ತೆ, ಬೋಗಾರ ವೇಸ್ ಸರ್ಕಲ್, ಖಾನಾಪುರ ರಸ್ತೆ, ಕಾಂಗ್ರೇಸ್ ರಸ್ತೆ, ಪೀರನವಾಡಿ ಕ್ರಾಸ್ ಮುಖಾಂತರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ [ವ್ಹಿಟಿಯು] ವರೆಗಿನ ರಸ್ತೆ.

ಬೆಳಗಾವಿ ನಗರದ ಅಲಾರವಾಡ ಬ್ರಿಜ್ ಹತ್ತಿರ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ರೈತ ಸಮಾವೇಶವನ್ನು ಹಮ್ಮಿಕೊಂಡಿದ್ದು, ಆ ಕಾಲಕ್ಕೆ ವಾಹನ ಸಂಚಾರ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ ಮಾಡಲಾಗುವ ರಸ್ತೆಗಳ ವಿವರ: ಅಲಾರವಾಡ ಅಂಡರ್ ಬ್ರಿಜ್‌ದಿಂದ ಧಾರವಾಡ ನಾಕಾವರೆಗಿನ ಯಡಿಯೂರಪ್ಪ ಮಾರ್ಗ ಹಾಗೂ ಹೊಸೂರ ಪಿಂಪಳ ಕಟ್ಟಾ ವರೆಗಿನ ಹಳೆ ಪಿಬಿ ರಸ್ತೆಯನ್ನು ನೋ-ಪಾರ್ಕಿಂಗ್ ಝೋನ ಅಂತ ಪರಿವರ್ತಿಸಿದ್ದು, ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದವರೆಗೆ ಈ ರಸ್ತೆಯಲ್ಲಿ ಯಾವುದೇ ರೀತಿಯ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.
ಅಲಾರವಾಡ ಅಂಡರ್ ಬ್ರಿಜ್‌ದಿಂದ ಹಲಗಾ ಕಡೆಗೆ ಹಾಗೂ ಬಳ್ಳಾರಿ ನಾಲಾ ಬ್ರಿಜ್ ಕಡೆಗೆ ಸಾಗುವ ಸರ್ವಿಸ್ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾದ ಸ್ಥಳಗಳ ವಿವರ:
ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ವಾಹನ ನಿಲುಗಡೆಗಾಗಿ ಸಮೀಪದ ಬಳ್ಳಾರಿ ನಾಲಾದ ಬಲಬಾಜು ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿತ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು.

Home add -Advt

Related Articles

Back to top button