Latest

ಅನಿಲ ಕುಬ್ಳೆಗೆ ಯಡೂರಿನಲ್ಲಿ ವಿಶ್ವಚೇತನ ಪ್ರಶಸ್ತಿ ಪ್ರದಾನ

ಪ್ರಗತಿವಾಹಿನಿ ಸುದ್ದಿ, ಯಡೂರು
ಇತ್ತಿಚಿನ ದಿನಗಳಲ್ಲಿ ಕ್ರಿಕೆಟ್ ತಂಡದಲ್ಲಿ ಬಹಳಷ್ಟು ಆಟಗಾರರು ಗ್ರಾಮೀಣ ಪ್ರದೇಶದವರಾಗಿದ್ದಾರೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಟಗಾರರ ಸಂಖ್ಯೆ ಹೆಚ್ಚಿದ್ದು ಅವರಿಗೆ ಪ್ರೋತ್ಸಾಹಧನ ನೀಡುವ ಅಗ್ಯತವಿದೆ ಎಂದು ಪ್ರಖ್ಯಾತ ಕ್ರಿಕೇಟ್ ಆಟಗಾರ ಅನಿಲ ಕುಂಬ್ಳೆ ಹೇಳಿದರು.

ಯಡೂರಿನಲ್ಲಿ ನಡೆಯುತ್ತಿರುವ ವಿಶಾಳಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ವಿಶ್ವಚೇತನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಯುವಕರು ಸತತ ಪರಿಶ್ರಮ ಪಡಬೇಕು.  ನಾನು ೬೧೯ ವಿಕೆಟ್ ಪಡೆಯಬೇಕಾದರೆ ಒಟ್ಟು ೪೨ ಸಾವಿರ ಬಾಲ್‌ಗಳನ್ನು ಎಸೆಯಬೇಕಾಯಿತು. ಎದೆಗುಂದದೆ ಮುನ್ನುಗ್ಗಬೇಕು. ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಡಾ. ಪ್ರಭಾಕರ ಕೋರೆ ಅವರ ಮುಂದಾಳತ್ವದ ಕೆ.ಎಲ್.ಇ. ಸಂಸ್ಥೆಯು ಆರೋಗ್ಯ ಮತ್ತು ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚು ಆದ್ಯತೆ ನಿಡುತ್ತಿದೆ ಎಂದು ಪ್ರಶಂಸಿಸಿದರು.

ಮಕ್ಕಳಿಗೆ ಓದಿನ ಜೊತೆಗೆ ಆಟವು ಮುಖ್ಯ. ಪ್ರತಿಯೊಬ್ಬರಿಗೆ ದೇವರ ಆಶಿರ್ವಾದದ ಜೊತೆಗೆ ತಂದೆತಾಯಿ ಮಾರ್ಗದರ್ಶನ ಅಗತ್ಯವಿದೆ. ಯುವಕರು ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಶ್ರಮವಿಲ್ಲದೆ ಏನೂ ಸಿಗುವುದಿಲ್ಲ. ಹಾಗಾಗಿ ನಿರಂತರ ಪರಿಶ್ರಮ ಪಡಬೇಕೆಂದು ಹೇಳಿದರು.

ಶ್ರೀಶೈಲ ಜಗದ್ಗುರು ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿಪೀಠದ ಜಗದ್ಗುರು ಶ್ರೀ ಡಾ ಚಂದ್ರಶೇಖರ ಶಿವಚಾರ್ಯ ಮಹಾಸ್ವಾಮೀಜಿ ಹಾಗೂ ನಿಡಸೋಶಿಯ ಶ್ರೀ ಜಗದ್ಗುರು ಶ್ರೀ ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿ ದಿವ್ಯಸಾನಿಧ್ಯವಹಿಸಿಕೊಂಡು ಆಶಿರ್ವಚನ ನೀಡಿದರು. ಪಡಸಾವಳಗಿಯ ಶ್ರೀ ಶಂಭುಲಿಂಗ ಶಿವಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿಕೊಂಡಿದ್ದರು. ಅಕ್ಕಲಕೋಟದ ಶ್ರೀ ಬಸವಲಿಂಗ ಸ್ವಾಮೀಜಿ, ಬೆಂಗಳೂರಿನ ವಿಭೂತಿಮಠದ ಶ್ರೀ ಡಾ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು, ಚಿಕ್ಕೋಡಿ ಶ್ರೀ ಸಂಪಾದನಾ ಮಹಾಸ್ವಾಮೀಜಿಗಳು, ಸಮ್ಮುಖವಹಿಸಿಕೊಂಡಿದ್ದರು. ಡಾ ಪ್ರೀತಿ ದೊಡವಾಡ ಸಮಾರಂಭದ ಅಧ್ಯಕ್ಷತೆಯನ್ನವಹಿಸಿಕೊಂಡಿದ್ದರು. ಅತಿಥಿಗಳಾಗಿ ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಅಣ್ಣಾಸಾಹೇಬ ಜೊಲ್ಲೆ, ಶಿರಸಿಯ ಡಾ ವೆಂಕಟರಮನ ಹೆಗಡೆ, ಧಾರವಾಡದ ಭೀಮಾಂಬಿಕಾ ನಶಿಬಿ, ಡಿಕೆಎಸ್.ಎಸ್.ಕೆ. ಸಂಚಾಲಕ ಅಜೀತ ದೇಸಾಯಿ, ಯಡೂರ ಪಿ.ಕೆ.ಪಿ.ಎಸ್. ಅಧ್ಯಕ್ಷ ರಣಜೀತ ದೇಸಾಯಿ, , ಗ್ರಾ.ಪಂ.ಅಧ್ಯಕ್ಷ ಭೀಮಗೌಡಾ ಪಾಟೀಲ ಸೇರಿದಂತೆ ಅನೇಕ ಗಣ್ಯರು, ಮಠಾಧೀಶರು ವೇದಿಕೆ ಮೇಲಿದ್ದರು.
ಈ ಸಮಾರಂಭದ ಸಾನಿಧ್ಯವನ್ನು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದರು. ನೇತೃತ್ವವನ್ನು ಕಾಶಿಯ ಜಗ್ಗುರುಗಳಾದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ನಿಡಸೋಶಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳು,  ವಹಿಸಿದ್ದರು.

Home add -Advt

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಕರ್ನಾಟಕ ರಾಜ್ಯಕ್ಕೆ ವೀರಶೈವ ಲಿಂಗಾಯತ ಮಠಗಳು ಕಾಯಕ ದಾಸೋಹದ ದೊಡ್ಡ ಕೊಡುಗೆ ನೀಡಿವೆ. ಕನ್ನಡಿಗ ಕ್ರಿಕೇಟ್ ಆಟಗಾರ ಅನೀಲ ಕಂಬ್ಳೆಯಂತಹ ಆಟಗಾರರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದು ಅವರಿಗೆ ಗಡಿಭಾಗದ ಯಡೂರ ಶ್ರೀಮಠದಿಂದ ಗೌರವಿಸುತ್ತಿರುವುದು ಇತಿಹಾಸ ಸೃಷ್ಟಿಸಿದೆ. ಸಮಾಜದ ಉನ್ನತಿಗಾಗಿ ರಾಜಕಾರಣಿಗಳು ನುಡಿದಂತೆ ನಡೆಯಬೇಕಾಗಿದ್ದು ಶ್ರೀಮಠದ ಅಭ್ಯುದಯಕ್ಕೆ ಪಕ್ಷಾತೀತವಾಗಿ ಕಾರ್ಯ ಮಾಡಬೇಕಾಗಿದೆ ಎಂದರು.

 

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಹಂಚಿರಿ ಮತ್ತು ಸಬ್ ಸ್ಕ್ರೈಬ್ ಮಾಡುವ ಮೂಲಕ ನಿರಂತರವಾಗಿ ಸುದ್ದಿ ಪಡೆಯಿರಿ)

 

Related Articles

Back to top button