ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅನ್ನ ಚೆಲ್ಲಬೇಡಿ ಪ್ಲೀಸ್, ತಿಂದು ಮುಗಿಸಿ ಪ್ಲೇಟ್ ಬೀಸಾಕಿ… ಹೀಗೆ ಬಾಲಕನೊಬ್ಬ ಅಂಗಲಾಚುವ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ಉಚಿತ ದಾಸೋಹ ಸೇವೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಅಂತಹ ವ್ಯವಸ್ಥೆಯ ಭಾಗವಾಗಿದ್ದ ಬಾಲಕನೊಬ್ಬ ಭಕ್ತರು ಅನ್ನ ವ್ಯರ್ಥ ಮಾಡದಂತೆ ಅಂಗಲಾಚುವ ದೃಷ್ಯ ಮನಕರಗುವಂತಿದೆ. ಭಕ್ತರೊಬ್ಬರು ಊಟ ಮಾಡಿ, ಪ್ಲೇಟ್ ನಲ್ಲಿ ಸ್ವಲ್ಪ ಅನ್ನ ಬಿಟ್ಟು ಚೆಲ್ಲಲು ಬರುತ್ತಾರೆ. ಹಾಗೆ ಇಟ್ಟ ಪ್ಲೇಟನಲ್ಲಿ ಉಳಿದಿರುವ ಅನ್ನ ನೋಡಿ ಅದನ್ನು ಕೈಗೆತ್ತಿಕೊಂಡ ಹುಡುಗ ಆ ವ್ಯಕ್ತಿಯನ್ನು ವಾಪಸ್ ಕರೆದು ಅಣ್ಣಾ, ಅನ್ನ ವ್ಯರ್ಥ ಮಾಡಬೇಡಿ. ತಿಂದು ಮುಗಿಸಿ ಪ್ಲೇಟ್ ಬೀಸಾಕಿ ಎಂದು ಬೇಡುತ್ತಾನೆ. ಆ ವ್ಯಕ್ತಿ ನನಗೆ ಹೊಟ್ಟೆ ತುಂಬಿದೆ, ಇನ್ನು ತಿನ್ನಲು ಸಾಧ್ಯವಿಲ್ಲ ಎಂದರೂ ಕೇಳದ ಬಾಲಕ ಅನ್ನ ಎಸೆಯಲು ಅವಕಾಶ ಕೊಡುವುದಿಲ್ಲ. ಬಾಲಕನ ಒತ್ತಾಸೆಗೆ ಕೊನೆಗೂ ಆ ವ್ಯಕ್ತಿ ಸಂಪೂರ್ಣ ತಿಂದು ಮುಗಿಸಿ ಪ್ಲೇಟ್ ಎಸೆಯುತ್ತಾನೆ.
ಆ ಬಾಲಕ ಅಲ್ಲೇ ನಿಂತು ಯಾರೂ ಅನ್ನ ಎಸೆಯದಂತೆ ನೋಡಿಕೊಳ್ಳುವ ಸಂಸ್ಕಾರ ಈ ಮಠದಲ್ಲೇ ಸಿಕ್ಕಿದ್ದು.
ಈ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಸಿದ್ದಗಂಗಾ ಮಠದಲ್ಲಿ ಬಾಲಕನಿಗೆ ಸಿಕ್ಕ ವಿದ್ಯೆ ಇದು. ಇದಕ್ಕಿಂತ ಇನ್ನೇನು ಬೇಕು? ವೀಡಿಯೋ ನೋಡಿ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ