ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಅವಳಿ ಗ್ರಾಮಗಳ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಇದೇ ಮೇ 21ರಿಂದ 24ವರೆಗೆ ಜಂಟಿಯಾಗಿ ನಡೆಯಲಿದೆ.
8 ವರ್ಷಗಳ ಬಳಿಕ ಅವರೊಳ್ಳಿ-ಬಿಳಕಿ ಅವಳಿ ಗ್ರಾಮಗಳ ಗ್ರಾಮದೇವತೆಯರ ಜಾತ್ರೆ ಪುನಃ ಈಗ ಜಂಟಿಯಾಗಿ ನಡೆಯುತ್ತಿದ್ದು. ಮೇ 21ರಂದು ಸಂಜೆ 5ಕ್ಕೆ ದೇವಿಯರ ಹೊನ್ನಾಟದೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಳ್ಳುವುದು. ಮೇ 22ರಂದು ಇಡೀ ದಿನ ಅವಳಿ ಗ್ರಾಮದಲ್ಲಿ ದೇವಿಯರ ಹೊನ್ನಾಟ ನಡೆಯುವುದು. ಹೊನ್ನಾಟದ ಬಳಿಕ ಅದೇ ದಿನ ಸಂಜೆ ದೇವಿಯರು ಸೀಮೆಗೆ ತೆರಳುವರು. ಮೇ 24ರಂದು ಇಬ್ಬರು ದೇವಿಯರನ್ನು ಅವಳಿ ಗ್ರಾಮದಲ್ಲಿನ ದೇವಸ್ಥಾನಗಳಲ್ಲಿ ಪುನಃ ಗದ್ದುಗೆಗೊಳಿಸಿ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ರಾತ್ರಿಯಿಡಿ ಹೊನ್ನಾಟ:
ಇನ್ನು ಈ ದೇವಿಯರ ಜಾತ್ರೆ ವಿಶೇಷ ಅಂದ್ರೆ ಮೇ 21ರಂದು ಸಂಜೆ ದೇವಸ್ಥಾನ ಬಿಟ್ಟು ಹೊನ್ನಾಟಕ್ಕಿಳಿಯುವ ದೇವಿಯರು ಅಂದು ರಾತ್ರಿಯಿಡೀ ವಿಶ್ರಮಿಸದೇ ಹೊನ್ನಾಟ ಆಡುವರು. ಮರುದಿನ ಅಂದ್ರೆ 22ರ ಸಂಜೆಯವರೆಗೂ ಕೂಡ 24 ಗಂಟೆಗಳ ಕಾಲ ನಿರಂತರವಾಗಿ ಹೊನ್ನಾಟ ಆಡುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ