ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ
ಗೋಕಾಕ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದ ಮಹಿಳೆ ಮತ್ತು ಮೂರು ಮಕ್ಕಳನ್ನು ರಕ್ಷಿಸಲಾಗಿದೆ.
ನಾಗರ ಮುನ್ನೋಳಿ ಗ್ರಾಮದ ಮಹಿಳೆ ತನ್ನ ಮೂರು ಮಕ್ಕಳು (ಒಂದು ಗಂಡು ಎರಡು ಹೆಣ್ಣು) ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳ.
ಈ ಸಂಧರ್ಭದಲ್ಲಿ ದೂಪದಾಳ ಗ್ರಾಮದ ಯುವಕರಾದ ರಮೇಶ್ ಗಾಡಿವಡ್ಡರ ಮತ್ತು ಪರಶುರಾಮ ಗಾಡಿವಡ್ಡರ ಅವರನ್ನು ರಕ್ಷಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜೊತೆ ಸೇರಿ ಅವರನ್ನು ಘಟಪ್ರಭಾ ಪೋಲಿಸ್ ಠಾಣೆಗೆ ಕರೆತಂದರು.
ಆನಂತರ ಅವರ ಸಂಬಂಧಿಕರಿಗೆ ಅವರನ್ನು ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ವಿಠ್ಠಲ ಗಾಡಿವಡ್ಡರ, ಕರ್ನಾಟಕ ರಕ್ಷಣಾ ವೇದಿಕೆಯ ರೆಹಮಾನ್ ಮೊಕಾಶಿ, ಅಜಿತ್ ಮಲ್ಲಾಪೂರ,ಅಮೀರ್ ಖಾನ್, ಜಗದಾಳ ರವಿ ನಾವಿ, ವಸಂತ ನಾಯಿಕ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ