Latest

ಇತಿಹಾಸದ ಪುಟ ಸೇರಲಿದೆಯೇ ಬಡವರ ಕಾರು?

    ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಬಡ-ಮಧ್ಯಮ ವರ್ಗದ ಜನರೂ ಕಾರಿನಲ್ಲಿ ಓಡಾಡುವಂತೆ ಮಾಡುವ ರತನ್ ಟಾಟಾ ಅವರ ಕನಸಿನ ಕೂಸು ನ್ಯಾನೋ ಕಾರು ಉತ್ಪಾದನೆ ಸಧ್ಯವೇ ಸ್ಥಗಿತವಾಗುವ ಸಾಧ್ಯತೆ ಇದೆ.

Home add -Advt

ಪರಿಸರದ ಗುಣಮಟ್ಟಗಳಿಗೆ ಅನುಗುಣವಾಗಿ ನವೀಕರಿಸುವ ಯೋಜನೆಯನ್ನು ಟಾಟಾ ಮೋಟಾರ್ಸ್  ಹೊಂದಿಲ್ಲ. ಹಾಗಾಗಿ 2020ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ಸ್ಥಗಿತವಾಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಟಾಟಾ ನ್ಯಾನೋ ಕೂಡ ಸೇರಿದೆ.

ಏಪ್ರಿಲ್ ನಲ್ಲಿ ಹೊಸ ಸುರಕ್ಷಾ ಮಾನದಂಡ ಜಾರಿಗೆ ಬರಲಿದ್ದು, 2020 ರ ವೇಳೆಗೆ ಬಿಎಸ್- VI ಜಾರಿಗೆ ಬರಲಿದೆ.  ಇದಕ್ಕೆ ಹೆಚ್ಚುವರಿ ಹೂಡಿಕೆ ಮಾಡಲು ಕಂಪನಿ ಸಿದ್ಧವಿಲ್ಲ. 

2009 ರಲ್ಲಿ  ಕೇವಲ 1 ಲಕ್ಷ ರೂಪಾಯಿಗೆ ಭಾರತದ ಮಾರುಕಟ್ಟೆಗೆ ನ್ಯಾನೋ ಕಾರು ಬರುವ ಮೂಲಕ ಹೊಸ ಸಂಚಲನ ಮೂಡಿಸಿತ್ತು. 
ಬಿಎಸ್ 6 ನಿಯಮಾವಳಿಯ ಪರೀಕ್ಷೆಯಲ್ಲಿ ನ್ಯಾನೋ ಕಾರು  ಪಾಸಾಗುವುದು ಕಷ್ಟವಾಗಿದ್ದು, ನ್ಯಾನೋ ಘಟಕದ ಮೇಲೆ ಹೂಡಿಕೆ ಮಾಡದಿರಲು ಟಾಟಾ ನಿರ್ಧರಿಸಿದೆ.

Related Articles

Back to top button