ಪ್ರಗತಿವಾಹಿನಿ ಸುದ್ದಿ, ಕಾರವಾರ
ಇರಾನ್ ಸಮುದ್ರದ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ಬಂಧಿತರಾಗಿದ್ದ ಉತ್ತರ ಕನ್ನಡದ ೧೮ ಮೀನುಗಾರರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ದುಬೈನ ಮೀನುಗಾರಿಕೆ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡದ ಈ ಮೀನುಗಾರರು ಕಳೆದ ಆಗಸ್ಟ್ ನಲ್ಲಿ ಇರಾನ್ ಗಡಿ ದಾಟಿ ಕಿಂಗ್ ಫಿಶ್ ಹಿಡಿದಿದ್ದರು. ಆ ವೇಳೆ ಇರಾನ್ ನ ತಟ ರಕ್ಷಕ ಪಡೆಯವರು ಮೀನುಗಾರರನ್ನು ಬೋಟ್ ನಲ್ಲೇ ಬಂಧಿಸಿ ಇಟ್ಟಿದ್ದರು.
ಭಾರತ ವಿದೇಶಾಂಗ ಸಚೀವಾಲಯದ ಸತತ ಪ್ರಯತ್ನದ ಫಲವಾಗಿ ಮೀನುಗಾರರನ್ನು ಇರಾನ್ ಸರಕಾರ ಬಿಡುಗಡೆಗೊಳಿಸಿದೆ.
ಇದೀಗ ಮೀನುಗಾರರು ಇರಾನದಿಂದ ದುಬೈಗೆ ತೆರಳುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ