ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಉಡಾನ್ ಯೋಜನೆಯ ಮೊದಲ ವಿಮಾನ ಬೆಳಗಾವಿಯಿಂದ ಬುಧವಾರ ಆರಂಭವಾಗಿದೆ.
ಬೆಳಗಾವಿಯಿಂದ ಇಂದು ಹೈದರಾಬಾದ್ ಗೆ ಸ್ಪೈಸ್ ಜೆಟ್ ವಿಮಾನ ಹಾರಾಡಿದೆ. ಸಂಜೆ 5.35ಕ್ಕೆ ಬೆಳಗಾವಿಗೆ ಆಗಮಿಸಿದ ವಿಮಾನ ಇಲ್ಲಿಂದ 5.55ಕ್ಕೆ ವಾಪಸ್ಸಾಗಿದೆ. ಕ್ಯೂ-400 ವಿಮಾನ 78 ಆಸನಗಳನ್ನು ಹೊಂದಿದ್ದು, ಮೊದಲ ದಿನವೇ 50 ಪ್ರಯಾಣಿಕರು ಆಗಮಿಸಿದ್ದು, 58 ಪ್ರಾಣಿಕರು ಇಲ್ಲಿಂದ ತೆರಳಿದ್ದಾರೆ.
ಉಡಾನ್ ಯೋಜನೆಯ ಮೊದಲ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಈ ಸಂಬಂಧ ವಿಮಾನನಿಲ್ದಾಣದಲ್ಲಿ ಕಾರ್ಯಕ್ರಮದ ಮೂಲಕ ಸಂಭ್ರಮವನ್ನೂ ಆಚರಿಸಲಾಯಿತು. ಮೊಂಬತ್ತಿ ಬೆಳಗಿ, ಕೇಕ್ ಕತ್ತರಿಸಿ ಮೊದಲ ವಿಮಾನ ಸ್ವಾಗತಿಸಲಾಯಿತು.
ಸ್ಪೈಸ್ ಜೆಟ್ ಸ್ಟೇಶನ್ ಮ್ಯಾನೇಜರ್ ನಿಯಾಜ್ ಶಿರಹಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
First Flight under Udaan-3 scheme to fly between Belagavi – Hyderabad today
ಉಡಾನ್ ಯೋಜನೆಯ ಮೊದಲ ವಿಮಾನ ನಾಳೆಯಿಂದ ಬೆಳಗಾವಿ-ಹೈದರಾಬಾದ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ