Latest

ಉಪಜಾತಿಗಳನ್ನು ನೋಡದೆ ವಿವಾಹವಾಗಿ; ಡಾ. ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ವಧು-ವರರು ಉಪಜಾತಿಯನ್ನು ನೋಡದೆ ತಮಗೆ ಬೇಕಾದ ವಧು-ವರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ವೀರಶೈವ ಲಿಂಗಾಯತ ವಧು-ವರ ಕೇಂದ್ರದ ವತಿಯಿಂದ ನಗರದ ಕೆಎಲ್‌ಇ ಜೀರಗೆ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ೫೭ನೇ ವಧು-ವರ ಹಾಗೂ ಪಾಲಕರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮತ್ತೋರ್ವ ಅತಿಥಿ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಸೊಸೆಯನ್ನು ಗಂಡನ ಮನೆಯವರು ತಮ್ಮ ಮಗಳಂತೆಯೇ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ, ಡಾ. ಎಫ್.ವಿ. ಮಾನ್ವಿ, ಬಸವರಾಜ ತರಗಾರ, ಡಾ. ಸಿದ್ದನಗೌಡ ಪಾಟೀಲ, ಪ್ರಕಾಶ ಬಾಳೇಕುಂದ್ರಿ, ಗುರುಸಿದ್ದಪ್ಪ ಚೊಣ್ಣದ, ರತ್ನಪ್ರಭಾ ಬೆಲ್ಲದ ಮುಂತಾದವರು ಇದ್ದರು.

Related Articles

Back to top button