Latest

ಏನೂ ಇಲ್ಲದಲ್ಲಿ ಎಲ್ಲವನ್ನೂ ಮಾಡಿರುವ ಮೇರು ವ್ಯಕ್ತಿತ್ವ ಸಿದ್ದಗಂಗಾ ಶ್ರೀಗಳದ್ದು

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳು ಏನೂ ಇಲ್ಲದಲ್ಲಿ ಎಲ್ಲವನ್ನೂ ಮಾಡಿರುವ ಮೇರು ವ್ಯಕ್ತಿತ್ವದ ನಡೆದಾಡುವ ದೇವರಾದ್ದವರು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.

ಸರ್ಕಾರಗಳು ಮಾಡದೆ ಇರುವ ಸಂದರ್ಭದಲ್ಲಿ ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ 80 ವರ್ಷಗಳಿಂದ ಅನ್ನ, ಜ್ಞಾನ ದಾಸೋಹವನ್ನು ನಿರಂತರವಾಗಿ ಮಾಡಿಕೊಂಡು ಬಂದ ಪರಮಪೂಜ್ಯರಾಗಿದ್ದಾರೆ. ಶ್ರೀಮಠದಿಂದ ಕೋಟಿಗಟ್ಟಲೆ ಜನ ವಿದ್ಯೆಯನ್ನು ಕಲಿತಿದ್ದಾರೆ. ಅವರ ಅಗಲುವಿಕೆ ನಮ್ಮಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಡಾ. ಶಿವಕುಮಾರ ಶ್ರೀಗಳ ಮೇರು, ಆದರ್ಶ ವ್ಯಕ್ತಿತ್ವವನ್ನು ನಾವು ಸ್ವಾಮೀಜಿಗಳು ಮೈಗೊಡಿಸಿಕೊಂಡರೆ ಖಂಡಿತವಾಗಿ ದೇಶ ವಿಶ್ವಗುರುವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಶೋಕ ವ್ಯಕ್ತಪಡಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button