Latest

ಏ.11ರಂದು ಹರಿದಾಸ ಹಬ್ಬದ ಶೋಭಾಯಾತ್ರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಹರಿದಾಸ ಸೇವಾ ಸಮಿತಿ ವತಿಯಿಂದ  ಭಾಗ್ಯನಗರದ ರಾಮನಾಥ ಮಂಗಲ ಕಾರ್‍ಯಾಲಯದಲ್ಲಿ ಏ.12 ರಿಂದ ಹಮ್ಮಿಕೊಳ್ಳಲಾಗಿರುವ ಹರಿದಾಸ ಹಬ್ಬದ ಪೂರ್ವಭಾವಿಯಾಗಿ ಏ.11 ರಂದು ಶೋಭಾಯಾತ್ರೆ ಜರುಗಲಿದೆ. ಅಂದು ಸಂಜೆ ೫.೩೦ ಕ್ಕೆ ಟಿಳಕಚೌಕದಿಂದ ಹೊರಡಲಿರುವ ಶೋಭಾಯಾತ್ರೆ ರಾಮಲಿಂಗ ಖಿಂಡ್ ಗಲ್ಲಿ, ಕಿರ್ಲೋಸ್ಕರ ರಸ್ತೆ ಮಾರ್ಗವಾಗಿ ಮಾರುತಿಗಲ್ಲಿ ಮಾರುತಿ ದೇವಸ್ಥಾನದವರೆಗೆ ಸಾಗಲಿದೆ.
ಬ್ರಾಹ್ಮಣ ಸಮಾಜದ ಮುಖಂಡರಾದ ಅನಿಲ ಪೋತದಾರ, ಖ್ಯಾತ ಗಾಯಕ ರಾಯಚೂರು ಶೇಷಗಿರಿದಾಸ ಹಾಗೂ ಗಣ್ಯಮಾನ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button