Latest

’ಕಾಮರ್ಸಿಯಾ’ ಉತ್ಸವದಲ್ಲಿ ಲಿಂಗರಾಜ ವಿದ್ಯಾರ್ಥಿಗಳ ಸಾಧನೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಬೆಂಗಳೂರಿನ ಕ್ರಿಸ್ಟು ಜಯಂತಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಫೆ.೨ ರಂದು ಜರುಗಿದ ’ಕಾಮರ್ಸಿಯಾ’ ರಾಷ್ಟ್ರೀಯ ಉತ್ಸವದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನಿಖಿಲ್ ನಾಗನೂರ ಬಿಸಿನೆಸ್ ಕ್ವಿಜ್‌ನಲ್ಲಿ ಪ್ರಥಮ, ತಂಜಿಲಾ ಜೋಗಿಮಡ್ಡಿ ಮಾರ್ಕೆಟಿಂಗ್‌ನಲ್ಲಿ ಪ್ರಥಮ, ತನುಜಾ ವಾಘ್ಮೊರೆ ಹಾಗೂ ರೋಹಿತ ಪಾಟೀಲ ಕಂಪ್ಲಾಯನ್ಸ್ ಸ್ಪರ್ಧೆಯಲ್ಲಿ ದ್ವಿತೀಯ, ಸೂರಜ ನಾಗನೂರ ಹಾಗೂ ರುತುಜಾ ಕುಲಕರ್ಣಿ ಬಿಸಿನೆಸ್ ಕ್ವಿಜ್‌ನಲ್ಲಿ ದ್ವಿತೀಯ, ಸುಷ್ಮಾ ಗಾಣಿಗೇರ ಮತ್ತು ಸಂದೀಪ ವಸ್ತ್ರದ ಫೈನಾನ್ಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 
ವಿಜೇತ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಡಾ.ಆರ್.ಎಂ. ಪಾಟೀಲ, ಅಧ್ಯಾಪಕರಾದ ಪ್ರೊ. ನಿಕಿತಾ, ಪ್ರೊ. ಪೂಜಾ ಮತ್ತು ಸಿಬ್ಬಂದಿ ಅಭಿನಂದಿಸಿದರು.

Related Articles

Back to top button