ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ
ಕಳೆದ 15 ತಿಂಗಳಿಂದ ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರ ವೇತನ ನೀಡದಿದ್ದನ್ನು ಖಂಡಿಸಿ ದಿ.11 ರಂದು ಸ್ಥಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಾ ವೃತದಲ್ಲಿ ಪ್ರತಿಭಟನೆ ಮಾಡುವುದಾಗಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಾಹಾಂತೇಶ ವಕ್ಕುಂದ ಹೇಳಿದರು.
ಪಟ್ಟಣದ ಪೌರ ಕಾರ್ಮಿಕ ಸಂಘದಿಂದ ತಹಶಿಲ್ದಾರ ಕಛೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ 15 ತಿಂಗಳಿನಿಂದ ವೇತನ ದೊರೆಯದೆ ಜೀವನ ಸಾಗಿಸುವುದು ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಎಲ್ಲ ಕುಟುಂಬಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೇತನ ಸಿಗದೆ ಕುಟುಂಬ ನಿರ್ವಹಣೆ ಮಾಡಲು ಅಸಾಧ್ಯವಾಗಿದೆ. ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಮಾಡಿರುವ ಸಾಲವನ್ನು ಪಾವತಿಸಲಾಗದೆ ಸಾಲಗಾರರು ಮನೆಯ ಬಾಗಲಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೆ ಹಲವಾರು ಭಾರಿ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದರೂ ನಮ್ಮ ಅಳಲಿಗೆ ಯಾರೂ ಸ್ಪಂದಿಸುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರಿದಲ್ಲಿ 11 ರಂದು ಪಟ್ಟಣದ ಚನ್ನಮ್ಮಾ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಹೇಳಿದರು.
ಪೌರ ಕಾರ್ಮಿಕರಾದ ತಿಪ್ಪಣ ಚುಳಕಿ, ಆನಂದ ಲಿಂಗಮೆತ್ರಿ, ಸುನೀಲ ಕಾದ್ರೋಳ್ಳಿ, ಬಾಲರಾಜ ಸಾಣಿಕೊಪ್ಪ, ಸೆದೆಪ್ಪ ಕರಿಕಟ್ಟಿ, ಹಳವಪ್ಪ ವಕ್ಕುಂದ, ಮಂಜುನಾಥ ಚಿನ್ನನ್ನವರ, ಮನೋಹರ ಚವ್ಹಾಣ, ಸುರೇಶ ಚುಳಕಿ, ಅಬ್ದುಲ್‌ಕರಿಂ ನಧಾಫ್, ರವಿ ಎಮ್ಮಿ, ಬಸವರಾಜ ಕರಿಕಟ್ಟಿ, ಜಗದೀಶ ಲಿಂಗಮೆತ್ರಿ, ರಫಿಕ ತಿಗಡೊಳ್ಳಿ, ವೀರಜಾಫರ ಗಡಕಾರಿ, ಅಬ್ದುಲ್‌ಸಾಬ ಹಸನಖಾದರ, ಶಾಂತವ್ವ ಕರಿಕಟ್ಟಿ, ನಿಲವ್ವ ವಕ್ಕುಂದ, ರುದ್ರವ್ವ ದೊಡಮನಿ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ