ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಯುವ ಉದ್ಯಮಿ ಕೈಸ್ ನೂರಾನಿ ಕರ್ನಾಟಕ ರಾಜ್ಯ ಬಿಲ್ಡರ್ಸ್ ಮತ್ತು ಡೆವಲಪ್ಪರ್ಸ್ ಅಸೋಸಿಯೇಶನ್ (ಕ್ರೆಡೈ) ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಈಚೆಗೆ ನಡೆದ ಕ್ರೆಡೈ ಕರ್ನಾಟಕ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, 2019-21ರ ಅವಧಿಗೆ ಈ ನೇಮಕ ಮಾಡಲಾಗಿದೆ.
ನೂರಾನಿ ಕಾರ್ಬೆಲ್ ಡೆವಲಪ್ಪರ್ಸ್ ಲಿ. ಮ್ಯಾನೇಜಿಂಗ್ ಡೈರಕ್ಟರ್ ಆಗಿರುವ ನೂರಾನಿ, ಕ್ರೆಡೈ ಬೆಳಗಾವಿ ಅಧ್ಯಕ್ಷರಾಗಿ 4 ವರ್ಷ ಕೆಲಸ ನಿರ್ವಹಿಸಿದ್ದಾರೆ. ಬೆಳಗಾವಿ ರೋಟರಿ ಕ್ಲಬ್ ನಲ್ಲಿ ಸಹ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಅತ್ಯಂತ ಸಣ್ಣ ವಯಸ್ಸಿನಲ್ಲಿ ನೂರಾನಿ ಕ್ರೆಡೈ ಪ್ರಮುಖ ಹುದ್ದೆಗೆ ನೇಮಕವಾಗಿರುವುದು ದಾಖಲೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ