ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜನವರಿ 26 ರಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಯುವವರೆಗೆ ಸಾರ್ವಜನಿಕ ಸುಗಮ ಸಂಚಾರ ದೃಷ್ಟಿಯಿಂದ ಮಾರ್ಗ ಬದಲಾವಣೆ ಹಾಗೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಕೊಲ್ಹಾಪುರ ಸರ್ಕಲ್ (ಶ್ರೀ ಕೃಷ್ಣ ದೇವರಾಯ ಸರ್ಕಲ್) ದಿಂದ ಕೆ.ಎಲ್.ಇ ಛತ್ರಿ ವರೆಗೂ ಸಂಚರಿಸುವ ಎಲ್ಲ ತರಹದ ಸರಕು ಸಾಮಗ್ರಿಗಳನ್ನು ಸಾಗಿಸುವ ಭಾರಿ ಹಾಗೂ ಲಘು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಕೆ.ಎಲ್.ಇ ಆಸ್ಪತ್ರೆಯ 2ನೇ ಗೇಟ್ ದಿಂದ ಕೆ.ಎಲ್.ಇ ಡೆಂಟಲ್ ಕಾಲೇಜು ವರೆಗಿನ ಎರಡು ಬದಿಯ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿಲಾಗಿದೆ.
ಎನ್.ಎಚ್-4 ರಸ್ತೆಯನ್ನು ಸೇರಲು ಕೊಲ್ಹಾಪುರ ಸರ್ಕಲ್ ದಿಂದ ಎಸ್ ಪಿ ಆಫೀಸ್ ರಸ್ತೆಯ ಮೂಲಕ ನ್ಯಾಯ ಮಾರ್ಗವಾಗಿ ಸಾಗಿ ಶ್ರೀನಗರ ಅಂಡರ್ ಬ್ರಿಡ್ಜ್ ಮೂಲಕ ಎನ್.ಎಚ್-4 ರಸ್ತೆಯನ್ನು ಸೇರಬಹುದಾಗಿದೆ.
ಚೆನ್ನಮ್ಮಾ ಸರ್ಕಲ್ ಕಡೆಯಿಂದ ಬರುವ ಎಲ್ಲ ತರಹದ ವಾಹನಗಳು ವಾಯ್ ಜಂಕ್ಷನ್ (ಸದಾಶಿವ ನಗರ ಕ್ರಾಸ್) ಲಕ್ಷ್ಮೀ ಕಾಂಪ್ಲೆಕ್ಸ್, ಅಜಂ ನಗರ ಸರ್ಕಲ್, ಬಾಕ್ಸಾಯಿಟ್ ರಸ್ತೆ ಮೂಲಕ ಎನ್ ಎಚ್-4 ರಸ್ತೆಯನ್ನು ಸೇರಬಹುದಾಗಿದೆ.
ಕೆಎಲ್‌ಇ ಆಸ್ಪತ್ರೆಗೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗಾಗಿ ಕೆ.ಇ.ಬಿ ಆವರಣದಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ