ಪ್ರಗತಿವಾಹಿನಿ ಸುದ್ದಿ, ಶಿರಸಿ
ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಕುಟುಂಬ ಸಮೇತರಾಗಿ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಏಪ್ರಿಲ್ ೨ ರಂದು ನಾಮ ಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಪತ್ನಿ ರೂಪಾ ಹೆಗಡೆ ಹಾಗೂ ಮಕ್ಕಳೊಂದಿಗೆ ಆಗಮಿಸಿ ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.
ನಾಳೆ ಬೆಳಿಗ್ಗೆ ಕಾರವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅನಂತ ಕುಮಾರ್ ಹೆಗಡೆ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಚುನಾವಣೆ ಪ್ರಜಾತಂತ್ರದ ವಿಶಿಷ್ಟ ಚುನಾವಣೆ. ದೇಶಕ್ಕೆ ಹೊಸ ದಿಕ್ಕು ಸಿಕ್ಕುತ್ತಿರುವ ಚುನಾವಣೆ. ರಾಷ್ಟ್ರೀಯ ಅಸ್ಮಿತೆ ಆಧಾರದ ಮೇಲೆ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಹೊಸ ಹೆಜ್ಜೆ ಇಡ್ತಾ ಇದ್ದೀವಿ. ಈ ಕ್ಷೇತ್ರದ ಜನರ ಆಶೀರ್ವಾದ ಇರಲಿ ಎನ್ನುವ ಬೇಡಿಕೆ ಮತ್ತು ಉತ್ತರಕನ್ನಡದಲ್ಲಿ ಹೆಚ್ಚಿನ ಬಹುಮತದೊಂದಿಗೆ ಬಿಜೆಪಿ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇಂದ್ರದಲ್ಲೂ ನಿಶ್ಚಿತವಾಗಿ ಮೆಜಾರಿಟಿಯಿಂದ ಬಿಜೆಪಿ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.