ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗೋಕಾಕ ತಾಲೂಕಿನ ಮಿಡಕನಟ್ಟಿಯ ಯೋಧನೋರ್ವ ಗುರುವಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಅಪ್ಪಯ್ಯಪ್ಪ ಕುಂಟಗೋಳ ಹುತಾತ್ಮನಾದ ಯೋಧ. ಒಂದು ವರ್ಷದ ಹಿಂದೆ ಸೇನೆಗೆ ಸೇರಿದ್ದ ಅಪ್ಪಯ್ಯಪ್ಪ ರಜೆಯ ಮೇಲೆ ಊರಿಗೆ ಬಂದಿದ್ದರು.
ಗ್ರಾಮದ ಸಮೀಪವೇ ಇವರ ಬೈಕ್ ಗೆ ಲಾರಿ ಢಿಕ್ಕಿಯಾಗಿದೆ. ಅಪ್ಪಯ್ಯಪ್ಪ ಸ್ಥಳದಲ್ಲೇ ಸಾವಿಗೀಡಾದರು. 24 ವರ್ಷದ ಅವರಿಗೆ ತಾಯಿ ಇದ್ದಾರೆ.