Latest

ಚುನಾವಣಾಧಿಕಾರಿ ಏನು ಮಾಡುತ್ತಿದ್ದಾರೆ?: ಬಿಜೆಪಿ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬ್ರಾಹ್ಮಣ ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತಕ್ಷಣ ಚುನಾವಣೆ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತೀಯ ಜನತಾಪಾರ್ಟಿ ಆಗ್ರಹಿಸಿದೆ.

ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತಿಹಾಸ, ಸ್ವಾತಂತ್ರ್ಯ ಹೋರಾಟದ ಪರಿಜ್ಞಾನವಿಲ್ಲದೆ ಮಾತನಾಡುವುದು ಅಕ್ಷಮ್ಯ ಅಪರಾಧ, ಚುನಾವಣೆ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಗ್ರಹಿಸಿದರು. 

ಜಿಲ್ಲಾ ಚುನಾವಣಾಧಿಕಾರಿ ಏನು ಮಾಡುತ್ತಿದ್ದಾರೆ. ಇಂತಹ ವಿಷಕಾರಿ ಹೇಳಿಕೆ ನೀಡಿದಾಗಲೂ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದ ಅವರು, ತಕ್ಷಣ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳದಿದ್ದಲ್ಲಿ ನಾವೇ ದೂರು ಸಲ್ಲಿಸುತ್ತೇವೆ ಎಂದು ಹೇಳಿದರು. 

ಒಂದು ಸಮಾಜವನ್ನು ಎತ್ತಿಕಟ್ಟುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ. ಅವರು ಕ್ಷಮೆ ಕೇಳಬೇಕು. ಬೆಳಗಾವಿಯ ಇತಿಹಾಸ ಓದಿಲ್ಲ, ನರಗುಂದಕರ್, ಗಂಗಾಧರರಾವ್ ದೇಶಪಾಂಡೆ, ಅಣ್ಣು ಗುರೂಜಿ ಸೇರಿದಂತೆ ಸಾವಿರಾರು ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಚುನಾವಣೆ ಬರುತ್ತೆ, ಹೋಗುತ್ತೆ. ಆದರೆ ಜನರ ಸಹಬಾಳ್ವೆಯನ್ನು ಕೆಡಿಸುವಂತೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿರುವುದು ಅಕ್ಷಮ್ಯ ಎಂದು ಜಿರಲಿ ಹೇಳಿದರು. 

ಸತೀಶ್ ಜಾರಕಿಹೊಳಿ ಇಡೀ ಜಿಲ್ಲೆಯ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಒಡೆದ ಕುಟುಂಬ. ಎಲ್ಲ ಕಾಂಗ್ರೆಸ್ ಮುಖಂಡರು ಅವರ ವಿರೋಧವಾಗಿದ್ದಾರೆ. ಹಾಗಾಗಿ ಮೇಲ್ವರ್ಗ, ಕೆಳವರ್ಗ ಎಂದು ವಿಭಜಿಸಿ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. 

ಶಾಸಕ ಅನೀಲ ಬೆನಕೆ, ಆರ್.ಎಸ್.ಮುತಾಲಿಕ, ಬಸವರಾಜ ರೊಟ್ಟಿ ಮೊದಲಾದವರಿದ್ದರು. 

ದೇಶಕ್ಕಾಗಿ ಕುಲಕರ್ಣಿ, ಜೋಶಿ, ದೇಶಪಾಂಡೆ ಮನೆತನದವರು  ಪ್ರಾಣ ಬಿಟ್ಟಿಲ್ಲ

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button