Latest

ಚೆನ್ನೈ ಆಸ್ಪತ್ರೆ ತಲುಪಿದ ಸಿದ್ಧಗಂಗಾ ಶ್ರೀ

 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಅನಾರೋಗ್ಯಕ್ಕೆ ತುತ್ತಾದ 111 ವರ್ಷದ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. 

Home add -Advt

ಶುಕ್ರವಾರ ಮಧ್ಯಾಹ್ನ ಶ್ರೀಗಳನ್ನು ಚೈನ್ನೈಗೆ ಕರೆದೊಯ್ಯಲಾಗಿದ್ದು, ವಾಹನ ಇಳಿದ ತಕ್ಷಣ ಸ್ವತಃ ನಡೆದುಕೊಂಡೇ ಆಸ್ಪತ್ರೆಯ ಒಳಕ್ಕೆ ತೆರಳಿದರು. ಅವರನ್ನು ಕರೆದೊಯ್ಯಲು ಟ್ರಾಲಿ ವ್ಯವಸ್ಥೆ ಮಾಡಲಾಗಿತ್ತಾದರೂ ಅದನ್ನು ನಿರಾಕರಿಸಿ ನಡೆದುಕೊಂಡೇ ಹೋದರು. ಅವರಿಗೆ ಅಳವಡಿಸಲಾಗಿರುವ ಸ್ಟಂಟ್ ಗಳ ಕಾರ್ಯವನ್ನು ಪರಿಶೀಲಿಸಿ ಅಗತ್ಯವಾದರೆ ಬದಲಾಯಿಸಲು ನಿರ್ಧರಿಸಲಾಗಿದೆ. ಸುಮಾರು 4 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದೆಂದು ಹೇಳಲಾಗಿದ್ದು, ನಿತ್ಯ ಅಲ್ಲೇ ಅವರಿಗೆ ಪೂಜೆಗೂ ವ್ಯವಸ್ಥೆ ಮಾಡಲಾಗಿದೆ. 

Related Articles

Back to top button