Latest

ಜಪಾನ ಸರ್ಕಾರದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಂಶೋಧನಾ ಯೋಜನೆಗೆ ಜಿಐಟಿ ಆಯ್ಕೆ

ಜಿಐಟಿ ಮತ್ತು ಜಪಾನ್ ತಾಂತ್ರಿಕ ಶಿಕ್ಷಣ ಸಂಸ್ಥೆ ನಡುವೆ ಒಪ್ಪಂದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಐ ಟಿ) ಜಪಾನ್ ಸರ್ಕಾರದ ಪ್ರತಿಷ್ಠಿತ “ಗ್ಲೋಬಲ್ ಬೇಸ್ಡ್ ಪ್ರಾಜೆಕ್ಟ್ ಪ್ರೋಗ್ರಾಂ (ಜಿ ಬಿ ಪಿ ಎಲ್) ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಜಪಾನ್ ತಾಂತ್ರಿಕ ಸಂಸ್ಥೆ ಶಿಬೌರಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಜೊತೆ ಶೈಕ್ಷಣಿಕ ಹಾಗೂ ಸಂಶೋಧನಾ ಒಡಂಬಡಿಕೆ ಮಾಡಿಕೊಂಡಿದೆ.

ಈ ಕಾರ್ಯಕ್ರಮ ಮೂಲವಾಗಿ ಇಂಡಸ್ಟ್ರಿ ವರ್ಷನ್ ಗಿ ೪.೦ ಸಂಬಂಧಿಸಿದ್ದಾಗಿದ್ದು ವಿದ್ಯಾರ್ಥಿಗಳು ಇದರ ಅಡಿಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ (ಇಂಟರ್ನ್ಯಾಶನಲ್ ಸ್ಟುಡೆಂಟ್ ಎಕ್ಸ್ಚೇಂಜ್ ಪ್ರೋಗ್ರಾಂ), ಇಂಟರ್ನ್ ಶೀಪ್ ಗಳು, ತಾಂತ್ರಿಕ ವಿನ್ಯಾಸ ಮತ್ತು ಯೋಜನೆಗಳು, ಸರ್ಟಿಫಿಕೇಶನ್ ಕೋರ್ಸ್ ಗಳಂತಹ ಹಲವಾರು ಶೈಕ್ಷಣಿಕ ಹಾಗೂ ಸಂಶೋಧನೆ ಚಟುವಟಿಕೆಗಳನ್ನು ಯೋಜಿಸಲಾಗಿದೆ.

ಈ ವಿಶೇಷ ಗೌರವಕ್ಕೆ ಭಾರತದ ಕೇವಲ ಎರಡು ಸಂಸ್ಥೆಗಳು ಆಯ್ಕೆಯಾಗಿವೆ. ಅದರಲ್ಲಿ ಜಿ ಐ ಟಿ ಯು ಒಂದು ಎಂಬುದು ಹೆಮ್ಮೆಯ ವಿಷಯ. ಆಯ್ಕೆಯಾದ ಇನ್ನೊಂದು ಸಂಸ್ಥೆ ಐಐಟಿ, ಗುವಾಹಟಿ.

ಇತ್ತೀಚೆಗೆ ಜಿ ಐ ಟಿ ಪ್ರಾಧ್ಯಾಪಕರನ್ನು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಈ ಕಾರ್ಯಕ್ರಮದ ಅಡಿಯಲ್ಲಿ ಕೆಲವು ದಿನಗಳ ಕಾಲ ಟೋಕಿಯೊದ ಶಿಬೌರಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಡಸ್ಟ್ರಿ ಗಿ ೪.೦ ಗಾಗಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕಾಗಿ ಭೇಟಿ ಕೊಟ್ಟಿದ್ದರು. ಇದರ ಸಂಪೂರ್ಣ ಖರ್ಚು ವೆಚ್ಚವನ್ನು ಜಪಾನ್ ಸರ್ಕಾರದ ಜೆ ಎ ಎಸ್ ಒ ಒ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಫೆಲೋಷಿಪ್ ಅಡಿಯಲ್ಲಿ ಜಪಾನ ಸರ್ಕಾರವೇ ನೋಡಿಕೊಳ್ಳುತ್ತದೆ.

ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ಜಿ ಐ ಟಿ ಯಲ್ಲಿ ಹಲವು ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆಮಾಡುತ್ತಾರೆ. ನಂತರ ಇವರು ಜಪಾನಿನ ತಾಂತ್ರಿಕ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಭ್ಯಾಸ ಮಾಡುತ್ತಾರೆ. ಇವತ್ತಿನ ಸ್ಪರ್ಧಾ ಯುಗದಲ್ಲಿ ಜಾಗತಿಕ ಮಾನ್ಯತೆ ಪಡೆಯಲು ಈ ಕಾರ್ಯಕ್ರಮ ಖಂಡಿತವಾಗಿಯೂ ನೆರವಾಗುತ್ತದೆ. ಈ ಒಡಂಬಡಿಕೆಯಂತೆ ಪ್ರಾಚಾರ್ಯರ ಅಧ್ಯಕ್ಷತೆಯಲ್ಲಿ ಮೂರೂ ಪ್ರಾಧ್ಯಾಪಕರನ್ನು ಒಳಗೊಂಡ ಜಿ.ಐ.ಟಿ ಯ ಶೈಕ್ಷಣಿಕ ನಿಯೋಗವು ಜಪಾನಗೆ ಇತ್ತೀಚೆಗೆ ಭೇಟಿ ನೀಡಿತ್ತು ಮತ್ತು ಟೊಕಿಯೊದ ಶಿಬೌರಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ಮತ್ತು ಪ್ರಾಧ್ಯಾಪಕರೊದಿಂಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಂಬಂಧದ ಬಗ್ಗೆ ವಿವರವಾದ ಚರ್ಚೆಗಳನ್ನು ಮಾಡಿದರು.

ಈ ಒಡಂಬಡಿಕೆಯ ಪ್ರಕಾರ, ಜಿಐಟಿಯಿಂದ ಆಯ್ದ ವಿದ್ಯಾರ್ಥಿಗಳು ಕೆಲವು ತಿಂಗಳುಗಳ ಕಾಲ ಟೋಕಿಯೊದಲ್ಲಿ ಸಂಶೋಧನಾ ತರಬೇತಿಗೆ ಎಂಜಿನಿಯರಿಂಗ್ ಅಧ್ಯಯನಗಳ ಭಾಗವಾಗಿ ಹೋಗಿ ಅಧ್ಯಯನ ನಡೆಸುತ್ತಾರೆ. ಸಂವಹನ ಎಂಜಿನಿಯರಿಂಗ್, ರೊಬೊಟಿಕ್ಸ್ ಮತ್ತು ಇಂಟೆಲಿಜೆಂಟ್ ಸಿಸ್ಟಮ್ಸ್, ಇನ್ಫೋಟೆಕ್., ಮೆಟೀರಿಯಲ್ಸ್, ಸಿವಿಲ್ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಈ ಎಲ್ಲ ವಿಭಾಗದಲ್ಲಿ ಜಿ ಐ ಟಿ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಕೃತಕ ಬುದ್ಧಿಮತ್ತೆ (ಎಐ), ಇಂಟರ್ನೆಟ್ ಆಫ್ ಥಿಂಗ್ಸ್(ಐ ಓ ಟಿ), ಬಿಗ್ ಡೇಟಾ ಮತ್ತು ರೊಬೊಟಿಕ್ಸ್ ತಂತ್ರಜ್ಞಾನಗಳನ್ನು ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ ೪.೦) ಪ್ರಮುಖ ತಂತ್ರಜ್ಞಾನಗಳೆಂದು ಪರಿಗಣಿಸಲಾಗುತ್ತದೆ.

ಈ ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ ೪.೦) ರ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಂಬರುವ ತಂತ್ರಜ್ಞರಿಗೆ ಮಾಹಿತಿ ಮತ್ತು ಸಂವಹನ (ಐಸಿಟಿ) ಕ್ಷೇತ್ರದಲ್ಲಿ ತಾಂತ್ರಿಕ ನಿಪುಣರನ್ನಾಗಿ ಮಾಡಲು ಜಪಾನ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ ಈ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಜಪಾನ್-ಏಷ್ಯಾ ವಿಜ್ಞಾನ ಯುವ ವಿನಿಮಯ ಕಾರ್ಯಕ್ರಮ (ಸಕುರಾ ವಿಜ್ಞಾನ ಯುವ ವಿನಿಮಯ)ದ ಅಡಿಯಲ್ಲಿ ಪ್ರಾರಂಭಿಸಿತು. ಜಪಾನ್ ಸರ್ಕಾರದ ಪರವಾಗಿ ಜಪಾನದ ಶಿಬೌರಾ ತಾಂತ್ರಿಕ ಮಹಾವಿದ್ಯಾಲಯ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button