
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಲ್ವಾರ್ ತೋರಿಸಿ ಹಾಡಹಗಲೇ ಜನರಿಂದ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ಬೆಂಗಳೂರಿಗರಿಗೆ ತಲೆನೋವಾಗಿದ್ದ ಆರೋಪಿ ಅರ್ಫಾಜ್ ನನ್ನು ಬಂಧಿಸಲಾಗಿದೆ. ಅ.22ರಂದು ಬಾಣಸವಾಡಿ ವ್ಯಾಪ್ತಿಯ ಅಂಗಡಿಗೆ ಬಂದ ಅರ್ಫಾಜ್, ತಲ್ವಾರ್ ತೆಗೆದು ಎಲ್ಲರನ್ನು ಹಯೆ ಮಾಡುವುದಾಗಿ ಬೆದರಿಸಿ, ಅಂಗಡಿ ಮಾಲೀಕನಿಂದ 4500 ರೂ ಸುಲಿಗೆ ಮಾಡಿ ತೆರಳಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಅಲ್ಲದೇ ಹಲವು ದಿನಗಳಿಂದ ಮಡಿವಾಳ, ಕೆಜಿಹಳ್ಳಿ ವ್ಯಾಪ್ತಿಯಲ್ಲಿಯೂ ಈತ ತಲ್ವಾರ್ ತೋರಿಸಿ ಲೂಟಿ ಮಾಡುತ್ತಿದ್ದ ಎನ್ನಲಾಗಿದೆ. ಅಂತಿಮವಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.