Latest

ಜಿಲ್ಲಾಧಿಕಾರಿ ಹೆಸರಿನಲ್ಲಿ ಹಣ ವಸೂಲಿ ಆರೋಪ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ‌ ಕಿತ್ತೂರು:
ಸ್ಥಳೀಯ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಜಿಲ್ಲಾಧಿಕಾರಿ ಹೆಸರು ಹೇಳಿ ರೈತರಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಿಕಿಗೆ ಬಂದಿದೆ.
ಜಮೀನು ಖರೀದಿ ಎಂದು ಪ್ರತಿದಿನ ನೋಂದಣಿ ಕಛೇರಿಗೆ ಬರುವ ಜನರಿಗೆ ಕಛೇರಿಯ ಸಿಪಾಯಿ ಗಿರಿಮಲ್ಲಪ್ಪ 10 ರೂ. ಮುಖ ಬೆಲೆಯ ಶಸ್ತ್ರಸೇನಾ ಧ್ವಜ ದಿನಾಚರಣೆ ಟಿಕೆಟ್ ಹಚ್ಚಿ ಜನರಿಂದ 270 ರೂ. ವಸೂಲಿ ಮಾಡುತ್ತಿದ್ದಾರೆ.  ಇದರ ಬಗ್ಗೆ ಸಿಪಾಯಿಯನ್ನು ಕೇಳಿದರೆ ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ ಎಂದು ಉತ್ತರ ನೀಡುತ್ತಾನೆ.
ಉಪನೋಂದಣಾಧಿಕಾರಿ ಮಾಳಗಿ ಅವರನ್ನು ಕೇಳದರೆ ನನಗೆ ಈ ವಿಷಯದ ಬಗ್ಗೆ ಮಾಹಿತಿ ಇಲ್ಲ ಅಂತಾ ಹೇಳುತ್ತಿದ್ದಾರೆ.  ಆದಷ್ಟೂ ಬೇಗ  ಸಂಬಂದ ಪಟ್ಟ ಅಧಿಕಾರಿಗಳು ಇವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಕೆಎಮ್ಎಫ್ ನಿರ್ದೇಶಕ ಬಸವರಾಜ ಪರವಣ್ಣವರ  ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button