ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿಗಳಿಬ್ಬರನ್ನು ಉತ್ತರ ಪ್ರದೇಶದ ಲಖ್ನೋದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯವರೆಂದು ಶಂಕಿಸಲಾದ ಇಬ್ಬರು ಉಗ್ರರನ್ನು ಸೆರೆಹಿಡಿಯವಾಗಿದ್ದು, ಶಹನ್ವಾಜ್ ಅಹ್ಮದ್ ಮತ್ತು ಅಖಿಬ್ ಅಹ್ಮದ್ ಮಲೀಕ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಉಗ್ರ ನಿಗ್ರಹ ದಳದ ಅಧಿಕಾರಿಗಳು ಇವರನ್ನು ಬಂಧಿಸಿದ್ದಾರೆ. ಜೈಷ್ ಇ ಮೊಹಮ್ಮದ್ ಸಂಘಟನೆಯವರೆಂದು ಪ್ರಥಮಿಕ ತನಿಖೆ ವೇಳೆ ಈ ಇಬ್ಬರೂ ಒಪ್ಪಿಕೊಂಡಿದ್ದು, ಶಹನ್ವಾಜ್ ಕುಲ್ಗಾಂನವನಾದರೆ, ಮಲೀಕ್ ಪುಲ್ವಾಮಾದವನು.
ಪುಲ್ಮಾಮಾ ಸ್ಫೋಟ ನಡೆದ ತಕ್ಷಣ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು. ಘಟನೆ ನಡೆದ ತಕ್ಷಣದಿಂದಲೇ ಭಾರತ ಉಗ್ರ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಂಡಿದ್ದು, ಕಾಶ್ಮೀರದಲ್ಲೂ ಕೆಲವರನ್ನು ಕೊಂದು ಹಾಕಿದೆ. ಇದೀಗ ಸಿಕ್ಕಿರುವ ಇಬ್ಬರಿಂದ ಹೆಚ್ಚಿನ ಮಾಹಿತಿ ಸಿಗಬಹುದೆನ್ನಲಾಗಿದೆ.