ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
2 ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದ ಎಸ್ಎಸ್ಎ ಮತ್ತು ಆರ್ ಎಂಎಸ್ಎ ಯೋಜನೆಗಳ ಶಿಕ್ಷಕರ ವೇತನ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಕೊನೆಗೂ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ 2019-20ರ ವೇತನಾನುದಾನ ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ.
2 ತಿಂಗಳಿಂದ ವೇತನವಿಲ್ಲದ್ದರಿಂದ ಶಿಕ್ಷಕರು ರಜರಯ ಮಜಾ ಅನುಭವಿಸದೆ, ಮಕ್ಕಳನ್ನೂ ಹೊರಗೆ ಕರೆದೊಯ್ಯಲಾಗದೆ, ಸಾಲದ ಕಂತು ತುಂಬಲಾಗದೆ, ಮನೆ ಬಾಡಿಗೆ ಕಟ್ಟಲಾಗದೆ ಪರದಾಡುತ್ತಿದ್ದರು.
ಪ್ರತಿ ವರ್ಷ ಟಿಜಿಟಿ ಶಿಕ್ಷಕರ ಪಾಡು ಇದೇ ಆದರೂ ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯ ಸರಕಾರ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.
ಬೇರೆ ನೌಕರರು, ಅಧಿಕಾರಿಗಳ ಸಂಬಳ ಒಂದು ವಾರ ವಿಳಂಬವಾದರೂ ಸಹಿಸದವರು ಈ ಶಿಕ್ಷಕರು ಮಾತ್ರ ಪರದಾಡುವಂತೆ ಮಾಡುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ