Latest

ತೆಲಂಗಾಣದಲ್ಲೂ ಅಭಯ ಪಾಟೀಲ್ ಸ್ವಚ್ಛತಾ ಅಭಿಯಾನ!

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಸೂರ್ಯೋದಯದ ಮೊದಲು ಬೆಳಗಾವಿ ದಕ್ಷಿಣದಲ್ಲಿ ಕಸ ಹೊಡೆಯುವ ಕಸಬರಗಿ ಸದ್ದು ಕೇಳಿದರೆ ಅಲ್ಲಿಯ ಜನ ಇಂದು ಸಂಡೇ ಶಾಸಕ ಅಭಯ ಪಾಟೀಲರ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ

ಈ ಭಾನುವಾರ ಬೆಳಗಾವಿ ದಕ್ಷಿಣದಲ್ಲಿ ಕಸಬರಗಿ ಸದ್ದು ಕೇಳಲೇ ಇಲ್ಲ. ಏಕೆಂದರೆ ಶಾಸಕ ಅಭಯ ಪಾಟೀಲ ಕಳೆದ ಒಂದು ವಾರದಿಂದ ತೆಲಂಗಾಣದ ಆದಿಲಾಬಾದ್ ನಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಬೀಡಾರ ಹೂಡಿದ್ದಾರೆ. ಅಲ್ಲಿಯ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ .
ಆದರೆ, ಭಾನುವಾರದ ತಮ್ಮ ಸ್ವಚ್ಛತಾ ಅಭಿಯಾನದ ಕಾಯಕವನ್ನು ಮಾತ್ರ ಅಲ್ಲಿಯೂ ಬಿಟ್ಟಿಲ್ಲ.

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಆದಿಲಾಬಾದ್ ಜಿಲ್ಲೆಯ ಕಾರ್ಯಕರ್ತರು ಸೇರಿಕೊಂಡು ಬೆಳಗಾವಿ ಜಿಲ್ಲಾ ಆಸ್ಪತ್ರೆಯಷ್ಟೇ ಗಲೀಜಾಗಿರುವ ಆದಿಲಾಬಾದ್ ಜಿಲ್ಲಾ ಆಸ್ಪತ್ರೆಯನ್ನು ಸ್ವಚ್ಛ ಮಾಡಿ ತೆಲಂಗಾಣದಲ್ಲಿಯೂ ಶಾಸಕ ಅಭಯ ಪಾಟೀಲ ಸ್ವಚ್ಛತಾ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಈ ಸಂಧರ್ಭದಲ್ಲಿ ತೆಲಂಗಾಣದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹತ್ತು ವರ್ಷದ ಹಿಂದೆಯೇ ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಎನ್ನುವ ಅಭಿಯಾನ ಆರಂಭಿಸಿ ಪ್ರತಿ ಭಾನುವಾರ ತಪ್ಪದೇ ಬೆಳಗಾವಿಯಲ್ಲಿ ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೇವೆ. ಒಂದು ವಾರದಿಂದ ತೆಲಂಗಾಣದಲ್ಲಿಯೇ ಚುನಾವಣೆ ಪ್ರಚಾರದಲ್ಲಿ ಇರುವದರಿಂದ ಇಲ್ಲಿಯೂ ಮಾಡಿದ್ದೇವೆ. ಪ್ರಧಾನಿ ನರೆಂದ್ರ ಮೋದಿ ಅವರು ದೇಶದಲ್ಲಿ ಸ್ವಚ್ಛತಾ ಅಭಿಯಾನ ಆರಂಭ ಮಾಡಿದ ಬಳಿಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದೆ. ದೇಶ ಸ್ವಚ್ಛತೆಯ ಕಡೆಗೆ ಹೆಜ್ಜೆ ಹಾಕುತ್ತಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

 

 

Related Articles

Back to top button