
ಪ್ರಗತಿವಾಹಿನಿ ಸುದ್ದಿ: ಟೆಂಪೋ ಟ್ರಾವೆಲರ್ ಬಸ್ ನಿಲ್ಲಿಸಿದ್ದ ಟ್ರೇಲರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಮಾತೋಡಾ ಎಂಬಲ್ಲಿ ನಡೆದಿದೆ.
ರಾಜಧಾನಿ ಜೈಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಫಲೋಡಿ ಜಿಲ್ಲೆಯಿಂದ ಭಾರತ್ ಮಾಲಾ ಹೆದ್ದಾರಿಯಲ್ಲಿರುವ ಮಾತೋಡಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ
ಸಾವನಪ್ಪಿದವರು ಜೋಧಪುರದ ಸುರ್‌ಸಾಗರ್ ಪ್ರದೇಶದ ನಿವಾಸಿಗಳಾಗಿದ್ದು, ಕಪಿಲ್ ಮುನಿ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬಿಕಾನೇರ್‌ನ ಕೊಲಾಯತ್ ದೇವಸ್ಥಾನದಿಂದ ಹಿಂತಿರುಗುತ್ತಿದ್ದರು ಎನ್ನಲಾಗಿದೆ.



