ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ
ನಿಪ್ಪಾಣಿ ಬಳಿ ಲಾರಿ ಮತ್ತು ಓಮಿನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ 6 ಜನ ಸಾವಿಗೀಡಾಗಿದ್ದಾರೆ.
ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಓಮಿನಿ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿಗೆ ಡಿಕ್ಕಿ ಹೊಡೆದಿದೆ. ಓಮಿನಿಯಲ್ಲಿದ್ದವರೆಲ್ಲ ಸಾವಿಗೀಡಾಗಿದ್ದಾರೆ ಎಂದು ಗೊತ್ತಾಗಿದೆ. ಮೃತರೆಲ್ಲ ಕೊಲ್ಲಾಪುರದ ಮುರಗೋಡ ಗ್ರಾಮದವರು.
ರಹೀಮಾ ಜಮಾದಾರ (55), ಆಫ್ರಿನ್ ಜಮಾದಾರ (33), ಜುನೀದ ಖಾನ್ ಜಮಾದಾರ (30), ದಿಲಾವರ ಜಮಾದಾರ (56), ಅಯಾನ್ ಜಮಾದಾರ (5) ಮೃತರು.
ನಿಪ್ಪಾಣಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ