Latest

ನೇಸರಗಿ ಬಳಿ ಸಿಕ್ಕ ಹಣದ ತೀವ್ರ ತಪಾಸಣೆ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತ್ತೂರ :

ಕಿತ್ತೂರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ನೇಸರಗಿ ಚೇಕ್ ಪೋಸ್ಟನಲ್ಲಿ ವಾಹನ ತಪಾಸಣೆ ಮಾಡುವಾಗ ವಾಹನದಲ್ಲಿ ಸಿಕ್ಕಿದ್ದ ರೂ.1 ಕೋಟಿ 90 ಲಕ್ಷ ಹಣದ ಬಗ್ಗೆ ಆದಾಯ ತೆರೆಗೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಬುಧವಾರ ಸಂಜೆ ಕೆಎ24 ಎ 0688 ಸ್ವೀಪ್ಟ ಡಿಸೈರ್ ಕಾರಿನಲ್ಲಿ ಬೆಳಗಾವಿಯಿಂದ ನೇಸರಗಿ ಮಾರ್ಗವಾಗಿ ಹಣವನ್ನು ಸಾಗಿಸಲಾಗುತಿತ್ತು. ತನಿಖೆ ವೇಳೆಯಲ್ಲಿ ಈ ಹಣ ಡಿಸಿಸಿ ಬ್ಯಾಂಕಿನಿಂದ ಇತರೆ ಶಾಖೆಗಳಿಗೆ ವರ್ಗಾವಣೆಗೊಳುತ್ತಿತ್ತು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ಲೈಯೀಂಗ್ ಸ್ಕಾಡ್ ಎಸ್.ಆರ್.ಮೆಹರವಾಡೆ ಹಾಗೂ ಚೆಕ್ ಪೋಸ್ಟ ಮುಖ್ಯಸ್ಥರು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರೆಂಬ ಮಾಹಿತಿ ದೊರೆತಿದೆ. ನಂತರ ಹಣಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

Home add -Advt

ಆದರೆ ಹಣಕ್ಕೆ ಸಂಬಂಧಿಸಿದ ಸಮರ್ಪಕವಾದ ದಾಖಲೆ ದೊರೆಯದ ಕಾರಣ ಸಂಶಯಗೊಂಡ ಅಧಿಕಾರಿಗಳು ಈ ವಿಷಯವನ್ನು ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದು ಕೂಡಲೇ ಕಾರ್ಯ ಪ್ರರ್ವತ್ತರಾದ ರಾಜೇಂದ್ರ ಬೆಕಲ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು ಈ ವಿಷಯವನ್ನು ಆದಾಯ ತೆರೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ನೇಸರಗಿ ಪೊಲೀಸ್ ಠಾಣೆಗೆ ಆಗಮಿಸಿದ ಆದಾಯ ತೆರೆಗೆ ಅಧಿಕಾರಿಗಳು ಬುಧವಾರ ತಡರಾತ್ರಿಯವರೆಗೂ ದಾಖಲೆಗಳನ್ನು ಪರಿಶಿಲಿಸಿದ್ದಾರೆಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನಂತರ ವಶಕ್ಕೆ ಪಡೆದ ಹಣವನ್ನು ತಾಲೂಕಿನ ಖಜಾನೆಯಲ್ಲಿರಿಸಿ ತನಿಖೆಯನ್ನು ಕೈಗೊಂಡಿದ್ದಾರೆ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದ ಆದಾಯ ತೆರಿಗೆ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ರಾಜೇಂದ್ರ ಬೆಕಲ್, ತಹಶೀಲ್ದಾರ ವಿವೇಕ ಶೇಣೈ, ಡಿವೈಎಸ್ಪಿ ಕರುಣಾಕರ ಶೆಟ್ಟಿ, ಪ್ಲೈಯಿಂಗ್ ಸ್ಕಾಡ್ ಎಸ್.ಆರ್, ಮೆಹರವಾಡೆ, ಚೆಕ್ ಪೋಸ್ಟ ಮುಖ್ಯಸ್ಥ ಪೂಜೇರ, ನೂಡೆಲ್ ಅಧಿಕಾರಿ ಯೋಗೇಶ್ವರ, ನೇಸರಗಿ ಪಿಎಸೈ ಆರ್.ಎಸ್.ಜಾನರ್, ಇದ್ದರು.

Related Articles

Back to top button