ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
“ಈಗ ತಾನೆ ಟಿಕೆಟ್ ಘೋಷಣೆಯಾಗಿದೆ. ನಾವು ಪಕ್ಷದ ಶಿಸ್ತಿನ ಸಿಫಾಯಿಗಳು. ಸಧ್ಯಕ್ಕೆ ನಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಮರುಪರಿಶೀಲನೆಗೆ ಮನವಿ ಮಾಡುತ್ತೇವೆ. ಮುಂದಿನದನ್ನು 4ನೇ ತಾರೀಖಿನವರೆಗೆ ಕಾದು ನೋಡಿ”
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ರಮೇಶ ಕತ್ತಿಯವರಿಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಮಾಜಿ ಸಚಿವ ಉಮೇಶ ಕತ್ತಿ ನೀಡಿರುವ ಪ್ರತಿಕ್ರಿಯೆ ಇದೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಈಗಷ್ಟೆ ಟಿಕೆಟ್ ಘೋಷಣೆಯಾಗಿದೆ. ಮುಂದೆ ಏನೇನಾಗುತ್ತದೆ ನೋಡೋಣ. ನಾವೂ 4ನೇ ತಾರೀಖಿನವರೆಗೆ ಕಾದು ನೋಡುತ್ತೇವೆ. ಎಲ್ಲರ ಸಲಹೆ ಪಡೆಯುತ್ತೇವೆ. ಮುಂದೆ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ರಮೇಶ ಕತ್ತಿ ಮತ್ತು ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಪಕ್ಷ ಜೊಲ್ಲೆಯವರಿಗೆ ಟಿಕೆಟ್ ಘೋಷಣೆ ಮಾಡಿದೆ.
ರಮೇಶ ಕತ್ತಿ ಕಾಂಗ್ರೆಸ್ ಸೇರಿ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಪಡೆಯುತ್ತಾರೆ ಎನ್ನುವ ಸುದ್ದಿಯೂ ಇದೆ. ಕಾಂಗ್ರೆಸ್ ಚಿಕ್ಕೋಡಿಗೆ ಪ್ರಕಾಶ ಹುಕ್ಕೇರಿ ಹೆಸರು ಘೋಷಣೆ ಮಾಡಿದೆ. ಆದರೆ ಅವರು ಈವರೆಗೂ ನಾಮಪತ್ರ ಸಲ್ಲಿಸಿಲ್ಲ. ಪ್ರಕಾಶ ಹುಕ್ಕೇರಿ ಬೆಳಗಾವಿ ಕ್ಷೇತ್ರ ಕೊಡುವಂತೆ ಈ ಮೊದಲು ವಿನಂತಿಸಿದ್ದರು.
ಚಿಕ್ಕೋಡಿಗೆ ಜೊಲ್ಲೆ, ಕೊಪ್ಪಳಕ್ಕೆ ಕರಡಿ, ರಾಯಚೂರಿಗೆ ಅಮರೇಶ್
ಬಿಜೆಪಿ: ಬೆಳಗಾವಿಗೆ ಸುರೇಶ ಅಂಗಡಿ, ಚಿಕ್ಕೋಡಿಗೆ ಜೊಲ್ಲೆ?
ರಮೇಶ ಕತ್ತಿ ಕಾಂಗ್ರೆಸ್ ಗೆ ಬಂದರೂ ಈ ಬಾರಿ ಟಿಕೆಟ್ ಕೊಡಲ್ಲ- ಚಿಂಗಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ