Latest

ಪತ್ನಿಯ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ವಾರಣಾಸಿ

ಪತ್ನಿಯ ಕುರಿತು ಹೆಸರನ್ನು ಹೊರತುಪಡಿಸಿ ಮತ್ತೇನೂ ಗೊತ್ತಿಲ್ಲ ಎಂದು ಪ್ರಧಾನಿ ನರೇದ್ರ ಮೋದಿ ತಿಳಿಸಿದ್ದಾರೆ.

ವಾರಣಾಸಿ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಕಣಕ್ಕಿಳಿದಿರುವ ಅವರು ಇಂದು ತಮ್ಮ ನಾಮಪತ್ರ ಸಲ್ಲಸಿದರು. ನಾಮಪತ್ರದಲ್ಲಿ ಪತ್ನಿಯ ಕುರಿತು ವಿವರ ತುಂಬುವಾಗ ಅವರ ಹೆಸರು ಯಶೋಧಾ ಬೆನ್ ಎಂದು ಉಲ್ಲೇಖಿಸಿದ್ದಾರೆ. ಉಳಿದಂತೆ ಅವರ ವಿವರಗಳೆಲ್ಲವನ್ನೂ ಗೊತ್ತಿಲ್ಲ ಎಂದೇ ತುಂಬಿದ್ದಾರೆ. ಅಲ್ಲದೆ ತಮಗೆ ಅವಲಂಬಿತರು ಯಾರೂ ಇಲ್ಲ ಎಂದೂ ಅವರು ಬರೆದಿದ್ದಾರೆ. ವಿದ್ಯಾಭ್ಯಾಸ ಎಂಎ ಎಂದು ಮೋದಿ ಉಲ್ಲಖಿಸಿದ್ದಾರೆ.

Home add -Advt

2013-14 : 9,68,711 ರು ಆದಾಯ. 2014-15: 8,58,780 ರು. 2015-16 : 19,23,160 ರು. 2016-17 : 14,59,750 ರು. 2017-18 : 19,92,520 ರು.
ಕೈಲಿರುವ ನಗದು 38,750 ರು (2018ರಲ್ಲಿ 48,944 ರು).  ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಠೇವಣಿ: 4,143 ರು.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಎಫ್ ಡಿ 1,27,81,574 ರು (2018ರಲ್ಲಿ 1,07,96,228ರೂ).  ಎಲ್‌ & ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್ ನಲ್ಲಿ ಆದಾಯ ತೆರಿಗೆ ಉಳಿಸುವ ನಿಟ್ಟಿನಲ್ಲಿ 20 ಸಾವಿರ ಗಳ ಮೌಲ್ಯದ ಬಾಂಡ್ ಹೊಂದಿದ್ದಾರೆ.  ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸರ್ಕಾರಿ ಒಡೆತನದ ಹೂಡಿಕೆಯಲ್ಲಿ 7,61,466ರು (2018ರಲ್ಲಿ 5,18,235ರೂ) ಮೌಲ್ಯದ ಬಾಂಡ್.  ಎಲ್ ಐಸಿಯಲ್ಲಿ 1,90,347ರು ( 2018ರಲ್ಲಿ 1,59,281ರೂಗಳ ವಿಮೆ ) ಪಾಲಿಸಿಯನ್ನು ಹೊಂದಿದ್ದಾರೆ.

ಚಿನ್ನಾಭರಣ ಇತರೆ ಚರಾಸ್ತಿ 45 ಗ್ರಾಂ ಚಿನ್ನ: 1,13,800 ರು ಮೌಲ್ಯ. ಟಿಡಿಎಸ್ ಕಡಿತ 2018-19ರ ಆರ್ಥಿಕ ವರ್ಷ : 85,145 ರು (ಅಂದಾಜು). ಪ್ರಧಾನಿ ಸಚಿವಾಲಯ 1,40,895 ರು. ಒಟ್ಟಾರೆ ಮೊತ್ತ : 1,41,36,119 ರು.

ಸ್ಥಿರಾಸ್ತಿ: ಗುಜರಾತ್ ನ ಗಾಂಧಿನಗರದ ವಸತಿ ಕಟ್ಟಡವೊಂದರಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ. 1.30,488 ರು. ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ನಿರ್ಮಾಣ ಹೂಡಿಕೆ 2,57,208 ರು. ಒಟ್ಟಾರೆ 1,10,00,000 ರು ಸ್ಥಿರಾಸ್ತಿ ಮೌಲ್ಯ.

 ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್ ನಲ್ಲಿ ಸರ್ಕಾರಿ ಮನೆ, ಗಾಂಧಿನಗರದಲ್ಲಿ ಸರ್ಕಾರಿ ವಸತಿ ಹೊಂದಿದ್ದಾರೆ.  ಯಾವುದೇ ಸಾಲ, ಯಾವುದೇ ತೆರಿಗೆ ಬಾಕಿ ಹೊಂದಿಲ್ಲ.  ಸರ್ಕಾರಿ ಹುದ್ದೆ ಹಾಗೂ ಬ್ಯಾಂಕಿನ ಬಡ್ಡಿದರವೇ ಆದಾಯದ ಮೂಲ ಎಂದಿದ್ದಾರೆ.

Related Articles

Back to top button