Latest

ಪದವಿಧರರಿಗೆ ಇಲ್ಲಿದೆ ಉದ್ಯೋಗಾವಕಾಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿಯಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. NCB-ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಿವಿಧ ಹುದ್ದೆಗಳಿಗೆ ಪದವಿಧರರಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ವಿಭಾಗದ 52 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಫ್ ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.

ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಇಂಟಲಿಜನ್ಸ್ ಆಫೀಸರ್ ಹುದ್ದೆಗಳಿಗಾಗಿ ಆಹ್ವಾನಿಸಲಾಗಿದ್ದು, ಮಾಸಿಕ ವೇತನ 9,300 ರೂ ನಿಂದ 34,800 ರೂ.ವರೆಗೆ ಇರಲಿದೆ.

Home add -Advt

ವಯೋಮಿತಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ದಾಟಿರಬಾರದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿ ಆಯ್ಕೆ ನಡೆಯಲಿದೆ.

ಹುದ್ದೆಗಳಿಗೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೇ ದಿನಾಂಕ ಮಾರ್ಚ್ 21, 2023.

ಅಭ್ಯರ್ಥಿಗಳು ಈ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ವಿಳಾಸ: Deputy Director General (HQ), Narcotics Control Bureau, West Block No.1, Wing No.5,
R.K.Puram, New Delhi-110066

ಹೆಚ್ಚಿನ ಮಾಹಿತಿಗಾಗಿ narcoticsindia.nic.in ಗೆ ಭೇಟಿ ನೀಡಿ

Related Articles

Back to top button