ಪ್ರಗತಿವಾಹಿನಿ ಸುದ್ದಿ, ಧಾರವಾಡ
ಧಾರವಾಡ ಕಟ್ಟಡ ಕುಸಿತದ 4ನೇ ದಿನ ಪತಿ-ಪತ್ನಿ ಪವಾಡ ರೀತಿಯಲ್ಲಿ ಹೊರಬಂದಿದ್ದಾರೆ.
ದಿಲೀಪ್ ಮತ್ತು ಸಂಗೀತಾ ಬದುಕಿ ಹೊರಬಂದಿರುವ ದಂಪತಿ.
ಇಂದು ಬೆಳಗ್ಗೆ ದಿಲೀಪ್ ಸಿಕ್ಕಿಕೊಂಡಿರುವುದು ರಕ್ಷಣಾ ಸಿಬ್ಬಂದಿಗೆ ಕಂಡುಬಂತು. ಅವರನ್ನು ಹೊರತರಲು ಮುಂದಾದ ರಕ್ಷಣಾ ಸಿಬ್ಬಂದಿಗೆ ಅವರು ತಮ್ಮ ಪತ್ನಿಯೂ ಇಲ್ಲಿಯೇ ಸಿಕ್ಕಿಕೊಂಡಿದ್ದಾಗಿಯೂ, ಅವಳನ್ನೂ ಹೊರಗೆ ತಂದರೆ ಮಾತ್ರ ತಾನೂ ಹೊರಗೆ ಬರುವುದಾಗಿ ಪಟ್ಟು ಹಿಡಿದರು.
ಸಂಕಷ್ಟಕ್ಕೆ ಸಿಲುಕಿದ ರಕ್ಷಣಾ ಸಿಬ್ಬಂದಿ ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ದಿಲೀಪ್ ಸಹ ಕೆಲವು ರಾಡ್ ಗಳನ್ನು ಬಗ್ಗಿಸಿದರು. ಪತ್ನಿಯ ಕಾಲ ಮೇಲೆ ಪಿಲ್ಲರ್ ಬಿದ್ದಿತ್ತು. ಎಲ್ಲವನ್ನೂ ತೆಗೆದು ಕೊನೆಗೂ ಇಬ್ಬರನ್ನೂ ಹೊರಗೆ ತರಲಾಯಿತು. ಪತಿ ತಾವೇ ನಡೆದು ಬಂದರೆ, ಪತ್ನಿಯನ್ನು ಹೊತ್ತು ತರಲಾಯಿತು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆಯಷ್ಟೆ ಸಂಗನಗೌಡ ಎನ್ನುವ ಯುವಕನನ್ನು ಹೊರಗೆ ತರಲಾಗಿತ್ತು. ಆತ ಕೂಡ 4 ದಿನದಿಂದ ಒಳಗಡೆ ಸಿಕ್ಕಿ ಬಿದ್ದಿದ್ದ.
ಕಾರ್ಯಾಚರಣೆ ಮುಂದುವರಿದಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಶೇರ್ ಮಾಡಿ)