Latest

ಪಾಕ್ ಪರ ಪೋಸ್ಟ್ ಹಾಕಿದ್ದು ಶಫಿ ಅಲ್ಲ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಬೆಂಬಲಿಗ ಶಫಿ ಎನ್ನುವವರು ಫೇಸ್‌ಬುಕ್‌ ನಲ್ಲಿ ಪಾಕಿಸ್ತಾನ ಪರ ಪೋಸ್ಟ್‌ ಹಾಕಿದ್ದಾರೆಂದು ಉಂಟಾಗಿದ್ದ ವಿವಾದಕ್ಕೆ ವಿಚಿತ್ರ ತಿರುವು ಸಿಕ್ಕಿದೆ.

Home add -Advt

ಪೋಸ್ಟ್ ಹಾಕಿದ್ದು ಶಫಿ ಅಲ್ಲ, ಅವರ ಮಾಜಿ ಸಹವರ್ತಿ ನಾಗರಾಜ ಮಾಳಿ ಎನ್ನುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ.

ಶಫಿಗೆ ಫೇಸ್ ಬುಕ್ ಖಾತೆ ಮಾಡಿಕೊಟ್ಟಿದ್ದ ನಾಗರಾಜ್ ಗೆ ಪಾಸ್ ವರ್ಡ್ ಗೊತ್ತಿತ್ತು. ಮೊದಲು ಅವರಿಬ್ಬರೂ ಸ್ನೇಹಿತರಾಗಿದ್ದರು. ನಂತರ ಕೆಲವು ಕಾರಣಕ್ಕಾಗಿ ವೈಮನಸ್ಸು ಮೂಡಿತ್ತು.

ಹಾಗಾಗಿ ದ್ವೇಷದಿಂದ ನಾಗರಾಜ ಶಫಿಯ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದ. ಇದೀಗ ನಾಗರಾಜನನ್ನು ಬಂಧಿಸಲಾಗಿದೆ.

ಪ್ರಕರಣದ ಸಂಬಂಧ ಸರಿಯಾಗಿ ತಿಳಿದುಕೊಳ್ಳದೆ ಪ್ರತಿಭಟನೆ ನಡೆಸಿದ್ದವರು, ಆಶೋಕ ಪಟ್ಟಣ ವಿರುದ್ಧ ಕೂಡ ಆರೋಪ ಮಾಡಿದ್ದವರು ಈಗ ಮುಜುಗರಕ್ಕೊಳಗಾಗಿದ್ದಾರೆ.

Related Articles

Back to top button