Latest

ಪಿಯುಸಿಯಲ್ಲಿ ಅನುತ್ತಿರ್ಣ, ನೇಣಿಗೆ ಶರಣಾದ ವಿದ್ಯಾರ್ಥಿನಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನೆಲೆಯಲ್ಲಿ ಇಲ್ಲಿಯ ನಾಗಲಿಂಗ ನಗರದ ವಿದ್ಯಾರ್ಥಿನಿ ಐಶ್ವರ್ಯಾ ಉಮೇಶ ಬೆಳಕೂಡ(೧೯)  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಸೋಮವಾರ ಪ್ರಕಟಗೊಂಡ ಪಿಯುಸಿ ೨ನೇ ವರ್ಷದ ವಿಜ್ಞಾನ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಮನನೊಂದು ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಐಶ್ವರ್ಯ ಧಾರವಾಡದ ವಿದ್ಯಾಗಿರಿಯ ಜಿಎಸ್ಎಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದುತ್ತಿದ್ದಳು. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಕಳಕಳಿ:

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಮುಂದೆ ಬೇಕಾದಷ್ಟು ಅವಕಾಶಗಳು ಬರುತ್ತವೆ. ಜೀವನದಲ್ಲಿ ಪಾಸಾಗುವುದು ಮುಖ್ಯವೇ ವಿನಃ ಪಿಯುಸಿ, ಎಸ್ಎಸ್ಎಲ್ ಸಿಯಲ್ಲಿ ಅಲ್ಲ. ಗಟ್ಟಿಯಾಗಿ ನಿಂತು ಜೀವನ ಎದುರಿಸಿ. ಪಾಲಕರೂ ಮಕ್ಕಳನ್ನು ನಿಂದಿಸಬೇಡಿ. ಪ್ರೀತಿಯಿಂದ ಧೈರ್ಯ ತುಂಬಿ.

ಅನುತ್ತೀರ್ಣರಾದ ಮಕ್ಕಳಿಗೆ ಕೌನ್ಸೆಲಿಂಗ್ ಅಗತ್ಯವಾದರೆ ಪ್ರಗತಿವಾಹಿನಿ ಸಂಪರ್ಕಿಸಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button