Latest

ಪ್ರತ್ಯೇಕ ಭಜನಾ ಅಕಾಡೆಮಿ ಸ್ಥಾಪಿಸಬೇಕು

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ರಾಜ್ಯದಲ್ಲಿ 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಭಜನಾ ತಂಡಗಳಲ್ಲಿಯ ಕಲಾವಿದರ ಪ್ರೋತ್ಸಾಹಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತ್ಯೇಕ ಭಜನಾ ಅಕಾಡೆಮಿ ಸ್ಥಾಪಿಸಬೇಕು’ ಎಂದು ಗೋಕಾಕ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.
ತಾಲ್ಲೂಕಿನ ಸುಣಧೋಳಿಯಲ್ಲಿ ಜಡಿಸಿದ್ಧೇಶ್ವರ ಭಜನಾ ಮಂಡಳಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಜನಾ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಭಜನಾ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಬಯಲಾಟ ಅಕಾಡೆಮಿ ಪ್ರತ್ಯೇಕ ಮಾಡಿರುವಂತೆ ನಿರ್ಲಕ್ಷತೆಗೆ ಒಳಗಾಗಿರುವ ಭಜನಾ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ದೊರೆಯಬೇಕಾಗಿದೆ ಎಂದರು. 
ಅತಿಥಿ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಮಾತನಾಡಿ, ಭಜನಾ ಕಲಾವಿದರಿಗೆ ಪ್ರೋತ್ಸಾಹ ಇಲ್ಲದೆ ಕಲೆ ನಶೀಶಿಹೋಗುವಂತ ದು:ಸ್ಥಿತಿ ಒದಗುವ ಮುಂಚೆ ಸಾಂಸ್ಕೃತಿಕ ಕ್ಷೇತ್ರವು ಜಾಗೃತರಾಗಬೇಕು ಎಂದರು.
ಮೂಡಲಗಿ ತಾಲ್ಲೂಕು ಕಸಾಪ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಮಾತನಾಡಿ, ದೇವರ ಧ್ಯಾನ, ಸ್ತುತಿ ಮಾಡಲಿಕ್ಕೆ ಭಜನೆಯು ಉತ್ತಮ ಮಾರ್ಗವಾಗಿದೆ. ಭಜನೆ ಗಾಯನವು ಜನರಲ್ಲಿ ಉತ್ಸಾಹವನ್ನು ತುಂಬುವ ಕಲೆಯಾಗಿದೆ ಎಂದರು. 
ಸಂಘದ ಅಧ್ಯಕ್ಷ ಭೀಮನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಭಜನಾ ಕಲೆಯನ್ನು ಬೆಳೆಸುವ ಸಲುವಾಗಿ ಸಂಘವನ್ನು ನೊಂದಣಿ ಮಾಡಿದ್ದು, ಜನರು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಶಿವಾನಂದ ಸ್ವಾಮೀಜಿ ಭಜನಾ ಕಲಾವಿದರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಭೀಮಶೆಪ್ಪ ಕಮತಿ, ರಾಜು ವಾಲಿ, ಸಹದೇವ ಕಮತಿ, ಗುರುರಾಜ ಪಾಟೀಲ, ವೀರಭದ್ರ ವಾಲಿ, ಮುರಿಗೆಪ್ಪ ಪಾಟೀಲ, ಶಿವುಕುಮಾರ ಅಂಗಡಿ, ಚಂದ್ರಶೇಖರ ಗಾಣಿಗೇರ, ಬಸು ಪಾಶಿ, ಶಿವು ಹಟ್ಟಿ, ಜಗದೀಶ ನರಗುಂದ, ಸತ್ತೆಪ್ಪ ಪಾಟೀಲ, ರವಿ ಹೊಟ್ಟಿಹೊಳಿ, ಮಾರುತಿ ನಾಯಿಕ, ಬನಪ್ಪ ದೇವರಮನಿ, ಬಸಪ್ಪ ಮಾದರ ಇದ್ದರು.
ಸಂಘದ ಸದಸ್ಯರಾದ ಚಿದಾನಂದ ಪೂಜೇರಿ, ಕಲ್ಲಪ್ಪ ಮಾದರ, ರವಿ ಗಾಣಿಗೇರ, ಮಾರುತಿ ಮಂಡರ, ಮಲ್ಲಿಕಾರ್ಜುನ ಕಮತಿ, ಯಲ್ಲಪ್ಪ ಮೇತ್ರಿ ಭಾಗವಹಿಸಿದ್ದರು. 
ಮಹಾಂತೇಶ ಅಂದಾನಿ ಹಾಗೂ ಮುತ್ತು ಜಿಡ್ಡಿಮನಿ ನಿರೂಪಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button