ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮತ್ತೋರ್ವ ಬಾಲಕಿ ಕಾಲೆಜು ಶುಲ್ಕ ಭರಿಸುವ ಮೂಲಕ ಬೆಳಗಾವಿಯ ನಿಯತಿ ಫೌಂಡೇಶನ್ ಅವಳ ಶಿಕ್ಷಣಕ್ಕೆ ನೆರವಾಗಿದೆ.
ಇಲ್ಲಿಯ ವೈಷ್ಣವಿ ಹಣಮಶೇಟ್ ವಾಣಿಜ್ಯ ವಿಷಯದಲ್ಲಿ ಶೇ.95ರಷ್ಟು ಅಂಕ ಪಡೆದಿದ್ದಾಳೆ.
ಸಾಮಾಜಿಕ ಕಾರ್ಯಕರ್ತೆ ಮೀರಾ ಕುಲಕರ್ಣಿ ಬಾಲಕಿಯ ಪರಿಸ್ಥಿತಿಯನ್ನು ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಅವರಿಗೆ ವಿವರಿಸಿದ್ದರು. ಸರ್ನೋಬತ್ ಆಕೆಯ ಕಾಲೆಜು ಶುಲ್ಕ 10 ಸಾವಿರ ರೂ.ಗಳನ್ನು ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ, ನಿಯತಿ ಫೌಂಡೆಶನ್ ಸೆಕ್ರೆಟರಿ ಮೋನಾಲಿ ಶಾಹ, ಉಪಾಧ್ಯಕ್ಶರಾದ ಡಾ.ಸಮಿರ ಸರನೋಬತ, ಕಿಶೊರ ಕಾಕಡೆ ಚೆಕ್ ಹಸ್ತಾಂತರಿಸಿದರು.
ಯಾರಾದರೂ ಆರ್ಥಿಕ ಸಹಾಯ ಮಾಡಲು ಆಸಕ್ತಿ ಹೊಂದಿದ್ದರೆ ನಿಯತಿ ಫೌಂಡೇಶನ್ (ಮೊ. 9632613269) ಸಂಪರ್ಕಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ