Latest

*ರಸ್ತೆ ದಾಟುತ್ತಿದ್ದ ರೈತನ ಮೇಲೆ ಹರಿದ ಬಸ್; ಎರಡೂ ಕಾಲುಗಳು ಕಟ್*

ಪ್ರಗತಿವಾಹಿನಿ ಸುದ್ದಿ: ರಸ್ತೆ ದಾಟುತ್ತಿದ್ದ ರೈತನ ಮೇಲೆ ಸರ್ಕಾರಿ ಬಸ್ ಹರಿದು ರೈತನ ಎರಡೂ ಕಾಲುಗಳು ಕಟ್ ಆಗಿರುವ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಎದುರು ನಡೆದಿದೆ.

ಕರಿಯಪ್ಪ ಮುಚ್ಚಿಕೊಪ್ಪನವರ (60) ಎಂಬುವವರು ಬಸ್ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡವರು. ಕೆಲಸದ ನಿಮಿತ್ತ ಹಾವೇರಿಗೆ ಬಂದಿದ್ದ ಕರಿಯಪ್ಪ, ಕೆಲಸ ಮುಗಿಸಿ ವಾಪಾಸ್ ಹಾನಗಲ್ ಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದು ಕರಿಯಪ್ಪ ಕಾಲಿನ ಮೇಲೆ ಹರಿದು ಹೋಗಿದೆ.

ಬಸ್ ಮುಂಬದಿ ಚಕ್ರಕ್ಕೆ ಸಿಲುಕಿ ಕರಿಯಪ್ಪ ಅವರ ಎರಡೂ ಕಾಲುಗಳು ತುಂಡಾಗಿದ್ದು, ರಸ್ತೆಯಲ್ಲೇ ನರಳಾಟ ನಡೆಸಿದ್ದಾರೆ. ಘಟನೆ ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ಚಾಲಕ ಮಲ್ಲಿಕಸಾಬ್ ನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಕರಿಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

Related Articles

Back to top button