Latest

ಬೆಳಗಾವಿ ದಕ್ಷಿಣ ಕ್ಷೇತ್ರ ಅಭಿವೃದ್ಧಿಗೆ ಅಭಯ ಪಾಟೀಲ ಸರಣಿ ಯೋಜನೆ

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಶಾಸಕ ಅಭಯ ಪಾಟೀಲ ಗುರುವಾರ ಬೆಳಗಿನ ಜಾವ 7 ಘಂಟೆಗೆ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದ ಅಭಿವೃದ್ಧಿಗೆ ಚಾಲನೆ ನೀಡಿದರು.

1.30 ಕೋಟಿ ರೂ ವೆಚ್ಚದಲ್ಲಿ ಉದ್ಯಾನವನದ ಅಭಿವೃದ್ಧಿ, ಆಕರ್ಷಕ ಮಕ್ಕಳ ಆಟಿಕೆ ಸಾಮುಗ್ರಿಗಳ ಅಳವಡಿಕೆ, ಪುಟ್ ಪಾತ್ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಭಯ ಪಾಟೀಲ ಪೂಜೆ ನೆರವೇರಿಸಿದರು.

 

ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಸ್ತೆಗಳ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ. ಜನೇವರಿ ತಿಂಗಳಲ್ಲಿ  ಕಾಮಗಾರಿಗಳು ಆರಂಭವಾಗುತ್ತವೆ‌. ಮೊದಲನೇಯ ರೆಲ್ವೇ ಗೇಟ್ ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ, ಶಿವಾಜಿ ಗಾರ್ಡನ್ ಪಕ್ಕದಲ್ಲಿರುವ ಭಾತಖಾಂಡೆ ಶಾಲೆಯಿಂದ ಎಂ ಆರ್ ಎಫ್ ಶೋ ರೂಂ ವರೆಗಿನ ರಸ್ತೆ, ರೂಪಾಲಿ ಕಲ್ಯಾಣ ಮಂಟಪದಿಂದ ವಿಆರಎಲ್ ಗೌಡನ್ ವರೆಗಿನ ರಸ್ತೆ, ಆರ್ ಪಿ ಡಿ ಸರ್ಕಲ್ ದಿಂದ ಜೈಲ್ ಶಾಲೆವರೆಗಿನ ರಸ್ತೆ, ಭಗತಸಿಂಗ್ ಉದ್ಯಾನದಿಂದ ಮೇಗದೂತ ಹೌಸಿಂಗ್ ಸೊಸಾಯಿಟಿ ಮುಖಾಂತಾರ ಶಹಾಪೂರ ಪೊಲಿಸ್ ಠಾಣೆಯ ವಡಗಾವಿ ಮುಖ್ಯ ರಸ್ತೆಗೆ ಜೋಡಣೆ, ಬ್ಯಾಂಕ್ ಆಫ್ ಇಂಡಿಯಾದಿಂದ ನಾಥ ಫೈ ಸರ್ಕಲ್ ವರೆಗಿನ ರಸ್ತೆ, ಅನಗೋಳ ನಾಕಾ (ಅನಗೋಳ ಮುಖ್ಯ ರಸ್ತೆ) ದಿಂದ ಹರಿ ಮಂದಿರ ಎದುರುಗಿನ ರಸ್ತೆ ಮುಖಾಂತರ ಛತ್ರಪತಿ ಸಂಭಾಜಿ ಮಹಾರಾಜರ ವೃತ್ತದ ವೆರೆಗೆ, ಮಹಾತ್ಮಾ ಪುಲೆ ರಸ್ತೆ, ಶಾಸ್ತ್ರೀನಗರದ ಎಲ್ಲ ಒಳ ರಸ್ತೆಗಳು, ಹುಲಬತ್ತಿ ಕಾಲೋನಿಯ ಎಲ್ಲ ಒಳರಸ್ತೆಗಳು, ಗೂಡ್ಸೆಡ್ ರೋಡ್ ನ ಎಲ್ಲ ಒಳರಸ್ತೆಗಳು, ಕಪಿಲ ಕಾಲೋನಿಯ ಎಲ್ಲ ಒಳರಸ್ತೆಗಳು, ಮಹಾದ್ವಾರ ರೋಡ್ ಎಲ್ಲ ಕ್ರಾಸ್ ರಸ್ತೆಗಳು, ನಾಥ ಪೈ ಸರ್ಕಲ್ ದಿಂದ ಶಾಲೆಯ ರಸ್ತೆ ಗಳ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದ್ದು ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

 

   ಜೊತೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪೀರನವಾಡಿ, ಮಚ್ಛೆ, ಹುಂಚ್ಯಾನಟ್ಟಿ ಸೇರಿದಂತೆ ನಾಲ್ಕು ಗ್ರಾಮ ಪಂಚಾಯ್ತಿಗಳ ವ್ತಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಜನೇವರಿ ತಿಂಗಳಲ್ಲಿ ಆರಂಭಗೊಂಡು ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅಭಯ ಪಾಟೀಲ ಹೇಳಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳ ಸುಧಾರಣೆ, ಚರಂಡಿ, ಡ್ರಿನೇಜ್ ನಿರ್ಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಂತರ ಪಾರ್ಕಗಳ ಅಭಿವೃದ್ಧಿ ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಅಭಯ ಪಾಟೀಲ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button