Latest

ಬೆಳಗಾವಿ ರೈಲು ನಿಲ್ದಾಣ ಉನ್ನತೀಕರಣಗೊಳಿಸಿ -ಸುರೇಶ ಅಂಗಡಿ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ರೈಲು ನಿಲ್ದಾಣಕ್ಕೆ ವಿವಿಧ ಆಧುನಿಕ ತಂತ್ರಜ್ಞಾನ ಅಳವಡಿಸಿ ನಿಲ್ದಾಣವನ್ನು ಉನ್ನತೀಕರಿಸಬೇಕು ಎಂದು ಲೋಕಸಭಾ ಸದಸ್ಯ ಸುರೇಶ ಅಂಗಡಿ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವಾನಿ ಲೋಹಾನಿಗೆ ಮನವಿ ಸಲ್ಲಿಸಿದ್ದಾರೆ.
ಧಾರವಾಡ ಸಂಸದ ಪ್ರಲ್ಹಾದ್ ಜೋಷಿಯವರೊಂದಿಗೆ ಮಂಗಳವಾರ ಲೋಹಾನಿಯವರನ್ನು ಭೇಟಿ ಮಾಡಿದ ಅಂಗಡಿ, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
 ಆಕ್ಟ್ ಅಪ್ರೆಂಟೈಸ್ ಅಭ್ಯರ್ಥಿಗಳು ಎದುರಿಸುತ್ತಿರುವ ಸವಾಲುಗಳಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು.  ಹೊಸದಾಗಿ ಶಿರಡಿಗೆ ಚಲಿಸುವ ಹುಬ್ಬಳ್ಳಿ-ವಾರಾಣಸಿ ರೈಲು ಬೆಳಗಾವಿ ಜಂಕ್ಷನ್ ಬಳಸಿಕೊಳ್ಳಬೇಕು,  ಬೆಳಗಾವಿ ದಕ್ಷಿಣದಿಂದ ಬರುವ ಜನರು ಸುತ್ತುಹಾಕಿ ನಿಲ್ದಾಣಕ್ಕೆ ಬರಬೇಕಾಗಿದೆ. ಹಾಗಾಗಿ ದಕ್ಷಿಣ ಭಾಗದ  ನಿಲ್ದಾಣದಲ್ಲಿ ಒಂದು ಕಟ್ಟಡ ನಿರ್ಮಿಸಿ ಪ್ರಯಾಣಿಕರಿಗೆ ಎಂಟ್ರಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಬೆಳಗಾವಿ ನಿಲ್ದಾಣದಲ್ಲಿ ಬಂದು ನಿಲ್ಲುವ ಗೂಡ್ಸ್ ಗಾಡಿಗಳನ್ನು ಆದಷ್ಟು ಬೇಗ ಸಾಂಬ್ರಾಕ್ಕೆ ವರ್ಗಾವಣೆ ಮಾಡಬೇಕು ಎಂದು ಅಂಗಡಿ ವಿನಂತಿಸಿದ್ದಾರೆ.
ಮನವಿಗಳನ್ನು ಗಮನಿಸಿದ ಅಧ್ಯಕ್ಷರು ಉತ್ತಮವಾಗಿ ಪ್ರತಿಕ್ರಿಯಿಸಿ ಎಲ್ಲಾ ಬೇಡಿಕೆಗಳನ್ನು ಕೂಡಲೇ ನೆರವೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸುರೇಶ ಅಂಗಡಿ ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button