Latest

ಬೆಳಗಾವಿ ವೋಟ್ಸ್ 100% ವಾಕಥಾನ್ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮತದಾರರಿಗೆ ಜಾಗೃತಿ ಮೂಡಿಸಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ವಾಕಥಾನ್ ಅಆರಂಭವಾಗಿದೆ.

ಸ್ವೀಪ್ ಕಮಿಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಸಿಇಒ ರಾಜೇಂದ್ರ ಕೆವಿ ಹಾಗೂ ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಹೊಸೂರ ವಾಕಥಾನ್ ಗೆ ಚಾಲನೆ ನೀಡಿದರು.

ಕಡ್ಡಾಯ ಮತದಾನದ ಜೊತೆಗೆ ನಿರ್ಭಯವಾಗಿ ಮತದಾನ ಮಾಡುವ ಕುರಿತು ಅರಿವು ಮೂಡಿಸುವುದು ಈ ವಾಕಥಾನ್ ಉದ್ದೇಶವಾಗಿದ್ದು, ಬೆಳಗಾವಿ ವೋಟ್ಸ್ 100% ಸಂಘಟನೆಗೆ ಧನ್ಯವಾದ ಹೇಳಿದರು.

ಸಾವಿರಾರು ನಾಗರಿಕರು ವಾಕಥಾನ್ ನಲ್ಲಿ ಭಾಗವಹಿಸಿದ್ದು, ಸಿಪಿಎಡ್ ಮೈದಾನದಿಂದ ಆರಂಭವಾಗಿದ್ದು, ಹಿಂಡಲಗಾ ಟೆಂಪಲ್, ಹನುಮಾನ್ ನಗರ, ಜಾಧವ ನಗರ ಮೂಲಕ ಸಿಪಿಎಡ್ ಮೈದಾನದಲ್ಲಿ ಮುಕ್ತಾಯವಾಗಲಿದೆ.

ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್, ಸಂದೀಪ್ ನಾಯರ್, ಸತೀಶ್ ಕುಲಕರ್ಣಿ, ಕಿರಣ ನಿಪ್ಪಾಣಿಕರ್, ಎಂ.ಕೆ.ಹೆಗಡೆ, ಆನಂದ ಬುಕ್ಕೆಬಾಗ, ಮುಕುಲ್ ಚೌದರಿ, ಶಶಿಧರ ನಾಡಗೌಡ, ರೋಹಿತ ದೇಶಪಾಂಡೆ, ಆಶುತೋವಿತ್ ಡೆವಿಡ್, ಅಜಯ ಹೆಡಾ, ಮಯೂರಾ ಶಿವಳಕರ್, ಕೀರ್ತಿ ಟೆಂಬೆ, ರೇಣು ಕುಲಕರ್ಣಿ, ನರಸಿಂಹ ಜೋಶಿ, ರಾಜೇಶ ಹೆಡಾ ಮೊದಲಾದವರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button