Latest

ಭಿನ್ನರ ಪಾಳೆಯದಲ್ಲಿ ಇನ್ನೂ 22 ಶಾಸಕರು?; ಹಿನ್ನಡೆಯಾಗಿರಬಹುದು, ಆದರೆ, ಪ್ಲ್ಯಾನ್ ಕೈಬಿಟ್ಟಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಯಚೂರಿಗೆ ತೆರಳಿ ಆಪರೇಶನ್ ಕಮಲ ಮಾಡಲು ಯತ್ನಿಸಿ ಆಡಿಯೋ ರೆಕಾರ್ಡ್ ನಲ್ಲಿ ಸಿಕ್ಕಿಬಿದ್ದಿದ್ದರಿಂದ ದಿಢೀರ್ ಸ್ಥಗಿತಗೊಂಡಿದ್ದ ಆಪರೇಶನ್ ಕಮಲ ಪ್ರಕ್ರಿಯೆ ಮತ್ತೆ ಚುರುಕು ಪಡೆದಿದ್ದು, ಅತೃಪ್ತ ಕಾಂಗ್ರೆಸ್ಸಿಗರನ್ನು ಒಗ್ಗೂಡಿಸುವ ಕೆಲಸ ಆರಂಭವಾಗಿದೆ.

ವಿಶ್ವಸನೀಯ ಮೂಲಗಳ ಪ್ರಕಾರ ಭಿನ್ನರ ಪಾಳೆಯದಲ್ಲಿ ಇನ್ನೂ 22 ಶಾಸಕರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟಕ್ಕೆ ಹಿನ್ನಡೆಯಾದಲ್ಲಿ ಭಿನ್ನರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಈ ಹಿಂದೆ ಆಪರೇಶನ್ ಕಮಲ ನಡೆದ ವೇಳೆಯಲ್ಲಿ 22 ಶಾಸಕರು ಕಾಂಗ್ರೆಸ್ ಬಿಡಲು ಸಿದ್ದರಾಗಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡಿದ ಯಡವಟ್ಟಿನಿಂದ ಅದಕ್ಕೆ ಹಿನ್ನಡೆಯಾಯಿತು. ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದಲ್ಲಿ ಈ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ ಎನ್ನುವುದು ಭಿನ್ನಮತೀಯರ ನಂಬಿಕೆ. 

ಕಾಂಗ್ರೆಸ್ ನಿಂದ ದೊಡ್ಡ ಪ್ರಮಾಣದಲ್ಲಿ ಶಾಸಕರು ಹೊರಬೀಳಲಿದ್ದಾರೆ. ಜೆಡಿಎಸ್ ನ ಕೆಲವರು ಕೂಡ ಭಿನ್ನರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರಕಾರ ರಚಿಸಿದಲ್ಲಿ ಯಾರ್ಯಾರಿಗೆ ಯಾವ್ಯಾವ ಅಧಿಕಾರ ನೀಡಬೇಕೆನ್ನುವ ಕುರಿತು ಸಹ ಮತುಕತೆ ನಡೆದಿದೆ ಎಂದು ಭಿನ್ನಮತೀಯ ನಾಯಕರೊಬ್ಬರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ನಮ್ಮ ಪ್ರಕ್ರಿಯೆಗೆ ಸ್ವಲ್ಪ ಹಿನ್ನಡೆಯಾಗಿರಬಹುದು. ಆದರೆ ನಾವು ನಮ್ಮ ಪ್ಲ್ಯಾನ್ ಕೈಬಿಟ್ಟಿಲ್ಲ. ಲೋಕಸಭಾ ಚುನಾವಣೆ ವೇಳೆಯ ಬೆಳವಣಿಗೆಗಳ ಯಾರ್ಯಾರು ನಮ್ಮ ಜೊತೆ ಇದ್ದಾರೆ, ಯಾರು ನಂಬಿಕೆಗೆ ಅರ್ಹರಲ್ಲ ಎನ್ನುವುದು ಇನ್ನಷ್ಟು ನಿಖರವಾಗಿದೆ. ಹಾಗಾಗಿ ಸ್ವಲ್ಪ ದಿನ ಕಾದು ನೋಡಿ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸ್ಪಷ್ಟರೂಪ ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button